Index   ವಚನ - 293    Search  
 
ಹಿಂಗದೆನ್ನಯ ಮನಸು ಗುರುಪಾ ದಂಗಳ ಕೃಪೆಯ ಪಡೆವೆನೆಂಬ ಸುಗ್ಗಿಯೊಳಗೆ ಸಿಲ್ಕಿ. ಸ್ವೇದಜ, ಉದ್ಬಿಜ, ಜರಾಯುಜ, ಅಂಡಜವೆಂಬ ಖ್ಯಾತಿಭವದೊಳು ಸಿಲ್ಕಿ ತೊಳಲಿ ಬಳಲಿ ಬಂದ ಆತ್ಮಶುದ್ಧ ಮೂರೇಳುದೀಕ್ಷೆಯನಿತ್ತು ಶಿವಕುಲ ಜತನ ಮಾಡಿದ ನಿಜಗುರುಪಾದಾಂಬುಜವ ಕಂಡು. | 1 | ನೆತ್ತಿಯೊಳಿಹ ಪರಬ್ರಹ್ಮವಸ್ತುವ ತೆಗೆದು ಬಿತ್ತೆನ್ನೀ ಕರಭೂಮಿಯಲ್ಲಿ ಪರತತ್ವವಂ ವಿಸ್ತರಿಸಿ ಮೂರು ಷಡ್ವಿಧ ಮೂವತ್ತಾರು ದುರ್ಗುಣ ಆತ್ಮ ಸರ್ವಲಿಂಗದೇಹಿಯ ಮಾಡ್ದ ಗುರುಪದವ. | 2 | ಪರಶಾಂತಿಯೆಂಬ ವಿಭೂತಿಯ ಪಣೆಯೊಳ ಗೊರದು ಭವಾಂತರಕರ್ಮವೆಂದೆಂಬ ಗಿರಿಯನಿಡುವ ವಜ್ರಗುಂಡು ರುದ್ರಾಕ್ಷಿಯ ಕೊರಳೊಳು ಧರಿಸ ಕಲಿಸಿದ ಗುರುಪಾದವ. | 3 | ವರಪಂಚಾಕ್ಷರಿಯ ದುರಿತಹರ ದುರ್ಗುಣನಾಶಂ ಪರತತ್ವಕಿದೇ ನಿತ್ಯಾನಂದ ನಿಜನೆಲೆಯೆಂದು ಒರೆದು ಶ್ರೋತ್ರದಿ ಸದಾಕಾಲದಿ ಪ್ರಣಮವನು- ಚ್ಚರಿಸೆಂದು ತೋರಿದ ಗುರುಪಾದಾಂಬುಜವ ಕಂಡು. | 4 | ಭವರೋಗಕಿದೆ ವೈದ್ಯ ಶಿವಪಾದಾಂಬು ಪ್ರಸಾದ ಹವಿ ಪಾಪಗಿರಿ ತರುಮರವನು ಸುಡುವುದು ಪವಿತ್ರವಿದ ಸವಿದು ಮೂರಡಿಕ್ರಾಂತನಾಗಿ ಪಾಲಿಪ ನಿಜಗುರುಪಾದಾಂಬುಜವ ಕಂಡು. | 5 | ಗುರುವಿಗೆ ತನುವು ಲಿಂಗಕೆ ಮನವು ಜಂಗಮಕೆ ವರಧನವನಿತ್ತು ಕಿಂಕರ ಭೃತ್ಯ [ಭಾವದಿಂ ಭವ] ಶರಧಿಯ ದಾಂಟುವ ಹಡಗವೆಂ ದೊರೆದು ಭಕ್ತಿಯ ಪಾಲಿಪ ನಿಜಗುರು ಪಾದವ. | 6 | ಇಂತು ಶಿವನ ಅಷ್ಟಾವರಣದೊಳಗೆ ಮನ[ವ ನಿಲಿಸಿ ಸಂತ ನಿರ್ಮ]ಲದೇಹಿಯಾಗಿ ಕೇಳ ನಿ- ಶ್ಚಿಂತ ಹೇಮಗಲ್ಲನೆಂದೊರೆದ ಗುರು ಪಡುವಿಡಿ ಶಾಂತ ರಾಜೇಶ್ವರನ ಪಾದಕಮಲಕೆ ಭೃಂಗನಾಗಿಹನು ಸದಾ. | 7 |