Index   ವಚನ - 294    Search  
 
ಅಂದು ಆದಿಯಲ್ಲಿ ಶಿವ ಬೀಜವಾಗಿ ಬಂದ ಕಾರಣ ಮರ್ತ್ಯಕೆ ಶಿವಭಕ್ತ [ರುದಯವಾಯಿ]ತು ನೋಡಯ್ಯ. ಅಂದು ಆದಿಯಲ್ಲಿ ಶಿವಬೀಜವಲ್ಲದಿದ್ದರೆ ಇಂದೆಲ್ಲಿಯದಯ್ಯಾ? ಶಿವಭಕ್ತನೆಂಬ ಶ್ರೇಷ್ಠತ್ವನಾಮ ಧರೆಯ ಮನುಜರೆಲ್ಲರಿಗಹುದೇನಯ್ಯ? ಶಿವಭಕ್ತಿ ಹಿಡಿದವರೆಲ್ಲ ಬಂಟರೆ? ಶಕ್ತಿಯ ಸಾಧಿಸಿದವರೆಲ್ಲ ಜಟ್ಟಿಗಳೇ? ಸ್ವರಗೈದ ಪಕ್ಷಿಗಳೆಲ್ಲ ಕೋಗಿಲೆಯಾಗಬಲ್ಲುವೆ? ಅಂಗಹೀನ ಮಾನವರೆಲ್ಲ ಲಿಂಗವ ಧರಿಸಿ ಲಿಂಗವಂತರೆಂದು ನುಡಿದುಕೊಂಡು ನಡೆದರೆ ಶಿವಭಕ್ತಿ ಸಾಧ್ಯವಾಗಬಲ್ಲುದೆ, ಜಗದ ಜಂಗುಳಿಯ ಮಾನವರಿಗೆ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.