ಅಂದು ಆದಿಯಲ್ಲಿ ಶಿವ ಬೀಜವಾಗಿ ಬಂದ ಕಾರಣ
ಮರ್ತ್ಯಕೆ ಶಿವಭಕ್ತ [ರುದಯವಾಯಿ]ತು ನೋಡಯ್ಯ.
ಅಂದು ಆದಿಯಲ್ಲಿ ಶಿವಬೀಜವಲ್ಲದಿದ್ದರೆ ಇಂದೆಲ್ಲಿಯದಯ್ಯಾ?
ಶಿವಭಕ್ತನೆಂಬ ಶ್ರೇಷ್ಠತ್ವನಾಮ ಧರೆಯ
ಮನುಜರೆಲ್ಲರಿಗಹುದೇನಯ್ಯ?
ಶಿವಭಕ್ತಿ ಹಿಡಿದವರೆಲ್ಲ ಬಂಟರೆ?
ಶಕ್ತಿಯ ಸಾಧಿಸಿದವರೆಲ್ಲ ಜಟ್ಟಿಗಳೇ?
ಸ್ವರಗೈದ ಪಕ್ಷಿಗಳೆಲ್ಲ ಕೋಗಿಲೆಯಾಗಬಲ್ಲುವೆ?
ಅಂಗಹೀನ ಮಾನವರೆಲ್ಲ ಲಿಂಗವ ಧರಿಸಿ ಲಿಂಗವಂತರೆಂದು
ನುಡಿದುಕೊಂಡು ನಡೆದರೆ ಶಿವಭಕ್ತಿ ಸಾಧ್ಯವಾಗಬಲ್ಲುದೆ,
ಜಗದ ಜಂಗುಳಿಯ ಮಾನವರಿಗೆ?
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Andu ādiyalli śiva bījavāgi banda kāraṇa
martyake śivabhakta [rudayavāyi]tu nōḍayya.
Andu ādiyalli śivabījavalladiddare indelliyadayyā?
Śivabhaktanemba śrēṣṭhatvanāma dhareya
manujarellarigahudēnayya?
Śivabhakti hiḍidavarella baṇṭare?
Śaktiya sādhisidavarella jaṭṭigaḷē?Svaragaida pakṣigaḷella kōgileyāgaballuve?
Aṅgahīna mānavarella liṅgava dharisi liṅgavantarendu
nuḍidukoṇḍu naḍedare śivabhakti sādhyavāgaballude,
jagada jaṅguḷiya mānavarige?
Paramaguru paḍuviḍi sid'dhamallināthaprabhuve.