ಲಿಂಗವಂತರು, ಲಿಂಗಾಚಾರಿಗಳಂಗಣಕ್ಕೆ.
ಲಿಂಗಾರ್ಪಿತ ಭಿಕ್ಷಕ್ಕೆ ಹೋದಲ್ಲಿ,
ಲಿಂಗಾರ್ಪಿತವ ಮಾಡುವಲ್ಲಿ,
ಸಂದೇಹವಿಲ್ಲದೆ ಕಾಣದುದನೆಚ್ಚರಿಸದೆ,
ಕಂಡುದ ನುಡಿಯದೆ, ಕಂಡುದನು ಕಾಣದುದನು,
ಒಂದೆಸಮವೆಂದುತಿಳಿಯಬಲ್ಲಡೆ,
ಕುಂಭೇಶ್ವರಲಿಂಗವೆಂಬೆನು.
Art
Manuscript
Music
Courtesy:
Transliteration
Liṅgavantaru, liṅgācārigaḷaṅgaṇakke.
Liṅgārpita bhikṣakke hōdalli,
liṅgārpitava māḍuvalli,
sandēhavillade kāṇadudaneccarisade,
kaṇḍuda nuḍiyade, kaṇḍudanu kāṇadudanu,
ondesamavendutiḷiyaballaḍe,
kumbhēśvaraliṅgavembenu.