Index   ವಚನ - 18    Search  
 
ಇಂತು ಭಕ್ತನ ಪದಿನೈದುಂ ಮಾಹೇಶ್ವರನೊಂಬತ್ತುಂ ಪ್ರಸಾದಿ ಏಳುಂ ಪ್ರಾಣಲಿಂಗಿಯೈದುಂ ಶರಣನ ನಾಲ್ಕುಮೈಕ್ಯನ ನಾಲ್ಕುಮಿದುಂ ನಿನ್ನ ತೂರ್ಯಕಳೇವರಮಯ್ಯ, ಸಮಷ್ಟಿ ಯಿಂತೀಯಂಗಸ್ಥಲಂಗಳು ನಾಲ್ವತ್ತನಾಲ್ಕುಂ ಕೂಡಿ ನಿನ್ನ ಪೂರ್ಣಾಂಗಮಾದುದಯ್ಯಾ, ನಿರಂತರ ಪರಬ್ರಹ್ಮ ಪರಮಶಿವಲಿಂಗೇಶ್ವರಾ.