Index   ವಚನ - 47    Search  
 
ಮತ್ತೆಯುಂ ರೂಪ ದ್ರವ್ಯ ಪದಾರ್ಥ ಸ್ನಾನ ಮಂತ್ರ ತೃಪ್ತಿಗಳೆಂಬಿವೆ ಷಡ್ವಿಧ ಕ್ರಿಯಾರ್ಪಣಂಗಳಿವಕ್ಕೆ ವಿವರಂ- ರೂಪಮೆನೆ ಭೋಜ್ಯ ಪಾನೀಯ ಭಕ್ಷ್ಯ ಚೋಷ್ಯ ಲೇಹ್ಯಂಗಳಿವರ ತೃಪ್ತಿ ಸಹ ನಿನ್ನ ಪೀಠಾದಿ ಮಸ್ತಕಾಂತ ಸಂಬಂಧ ಲಿಂಗಾರ್ಪಿತಮಾದುದಯ್ಯಾ, ಪರಮಶಿವಲಿಂಗ ನಿರ್ಜಿತ ಷಟ್ತರಂಗ.