Index   ವಚನ - 66    Search  
 
ದೇವತಾನ್ಯಾಸಾನಂತರದಲ್ಲಿ ಮಂತ್ರನ್ಯಾಸಮಂ ಪೇಳ್ವೆನೆಂತೆನೆ ಈ ಚಕ್ರದ ಕರ್ನಿಕಾವೃತ್ತದ ಚೌದಳದ ನಡುವೆ ಶಿವಬೀಜವಾದ ಹಕಾರವನಂಕಿಪುದು. ಮೂಡಣೆಸಳಲ್ಲಿ ಬಿಂದು ಸಂಜ್ಞಿತವಾದ ಸಕಾರವಂ ಲಿಖಿಪು ದಾತ್ಮಬೀಜವಾದಕಾರಮಂ ತೆಂಕಣೆಸಳಲ್ಲಿ ಬರೆವುದು. ಪಡುವಣೆಸಳಲ್ಲಿ ಸೂಕ್ಷ್ಮನಾದವೆನಿಸಿದೈಕಾರವನುದ್ಧರಿಪುದು. ಬಡಗಣೆಸಳಲ್ಲಿ ವಿದ್ಯಾಬೀಜವಾದ ಕ್ಷಕಾರವನಿರಿಸುವದಿಂತು ಕರ್ಣಿಕಾಪೂರ್ವದಕ್ಷಿಣಪಶ್ಚಿಮೋತ್ತರಂಗಳೆಂಬಿವೈದರಲ್ಲಿ ಹ ಸ ಅ ಐ ಕ್ಷ ಎಂಬೈದಕ್ಕರಂಗಳಂ ಭಾವಿಪುದೆಂದೆಯಯ್ಯಾ, ಪರಮಗುರು ಪರಮ ಶಿವಲಿಂಗೇಶ್ವರ.