Index   ವಚನ - 65    Search  
 
ಮರಲ್ದುಂ, ಮೂರನೆಯ ಸೂರ್ಯಮಂಡಲದ ಮೂವತ್ತೆರಡೆಸಳ್ಗಳಲ್ಲಿ- ಯನಂತ ಸೂಕ್ಷ್ಮ ಶಿವೋತ್ತಮೈಕ ನೇತ್ರೈಕರುದ್ರ ತ್ರಿಮೂರ್ತಿ ಶ್ರೀಕಂಠ ಶಿಖಂಡಿಗಳೆಂಬಷ್ಟ ವಿದ್ಯೇಶ್ವರ ರುದ್ರರ ಇಂದ್ರಾಗ್ನಿ ಯಮ ನಿರುತಿ ವರುಣ ವಾಯು ಕುಬೇರೀಶಾನರೆಂಬಷ್ಟ ಲೋಕಪಾಲರಂ ಧವ ಧ್ರುವಂ ಸೋಮನಪ[ನ]ನಿಲಂ ಅನಲ ಪ್ರತ್ಯೂಷ ಪ್ರಭಾಸರೆಂಬೀಯಷ್ಟವಸುಗಳ ಇಂದ್ರ ಸತ್ಯ ಭೃಂಗಿಯಂತರ್ಲಕ್ಷಣನೆಂಬೀಯಿಂದ್ರದಿಕ್ಕಿನ ಚೌದಳ ವಾಸ್ತವ ದೇವತೆಗಳ ನಗ್ನಿ ಪೂಷ ವಿಧಿ ದಮರೆಂಬಗ್ನಿದಿಕ್ಕಿನ ಚೌದಳದ ವಾಸ್ತವ ದೇವತೆಗಳನುಂ ಯಮ ಭಾಸ್ಕರ ಪುಷ್ಷದತ್ತ ಬಲಾಷ್ಮರೆಂಬೀ ಯಮದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ನೈರುತ್ಯ ದೌವಾರಿಕ ಸುಗ್ರೀವಾರುಣರೆಂಬೀ ನೈಋತ್ಯದಿಕ್ಕಿನ ಚೌದಳದ ವಾಸ್ತವ ದೇವತೆಗಳನುಂ, ವರುಣಾಸುರ ಗಹ್ವರ ವೇದರೆಂಬೀ ವರುಣದಿಕ್ಕಿನ ಚೌದಳದ ವಾಸ್ತವ ದೇವತೆಗಳನುಂ, ವಾಯು ನಾಗ ಮುಖ್ಯ ಸೋಮರೆಂಬೀ ವಾಯುದಿಕ್ಕಿನ ಚೌದಳದ ವಾಸ್ತವ ದೇವತೆಗಳನುಂ, ಕುಬೇರಾಗ್ಫರಾದಿತ್ಯದಿಂತಿಗಳೆಂಬ ಕುಬೇರದಿಕ್ಕಿನ ಚೌದಳದ ವಾಸ್ತವ ದೇವತೆಗಳನು ಮೀಶಾನ ಪರ್ಜನ್ಯ ಜಯಂತ ಸಂಕ್ರಂದರೆಂಬೀ ಈಶಾನ್ಯದಿಕ್ಕಿನ ಚೌದಳದ ವಾಸ್ತವ ದೇವತೆಗಳನುಮೀ ಪ್ರಕಾರಮಾದ ಮೂವತ್ತೆರಡು ದಳಂಗಳಲ್ಲಿ ಭಾವಿಪುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ ಚಿದ್‍ವ್ಯೋಮ ಪ್ರಭಾಕರ.