Index   ವಚನ - 69    Search  
 
ಮರಲ್ದುಮಿಂದ್ರಾಗ್ನಿ ಯಮ ನಿಋತಿ ವರುಣ ವಾಯು ಕುಬೇರೀಶಾನರೆಂಬಷ್ಟ ದಿಗ್ದಳಂಗಳ ನಾಲ್ಕರಲ್ಲಿ ಮೊದಲೊಂದೊಂದು ದಳಂಗಳಂ ಬಿಟ್ಟುಳಿದಿಂದ್ರಾದಿ ದಿಶಾಪದಿಶಾ ದಳತ್ರಯದಲ್ಲಿ ಭಾವಸಂಜ್ಞಿಕಮಾದ ವ್ಯಂಜನಂಗಳಂ ಸ್ವರಂಗಳನುಮದರಲ್ಲಿ ಸ ಮೂರ್ತಿಸಂಜ್ಞಿಕಮಾದ ದೀರ್ಘಂಗಳ ನ್ಯಾಸಮಂ ಮಾಡಿ ಕ್ರಮದಿಂ ಭಜಿಪುದೆಂದೆಯಯ್ಯಾ, ಪರಮಶಿವಲಿಂಗೇಶ್ವರ ಪ್ರಮಥಪದ್ಮ ದಿವಾಕರ.