ಮತ್ತಮಾಯಗ್ನಿಂದು ಸೂರ್ಯ ಸಂಜ್ಞಿಕ
ಮಂಡಲತ್ರಯದ ದಳಂಗಳಲ್ಲಿ,
ತರದಿಂ ಪ್ರದಕ್ಷಿಣದಿಂ ಮೂಡಂತೊಡಗಿಯಗ್ನಿ
ಮಂಡಲದ ಪೂರ್ವದಳದಲ್ಲಿ,
ಬಿಂದು ಸಂಜ್ಞಿಕವಾದ ಸಕಾರಮನದರಾಚೆಯ
ಚಂದ್ರಮಂಡಲದ ಪೂರ್ವದಳದಲ್ಲಿ
ತತ್ವಬೀಜ ಸಂಜ್ಞಿಕವಾದಕಾರಮಂ
ಮೂರ್ತಿಬೀಜ ಸಂಜ್ಞಿಕಮಾದಾಕಾರಮುಮನಿಂದ್ರಾಗ್ನಿಗಳಪ
ದಿಕ್ಕಿನೊಳ್ಬರೆವುದು.
ಸೂರ್ಯಮಂಡಲದ ಪೂರ್ವದಳದೊಳುಮಾ ಇಂದ್ರಾಗ್ನಿಗಳಪದಿಕ್ಕಿನ
ದಳಂಗಳಲ್ಲಿಯುಂ,
ಭಾವಸಂಜ್ಞಿಕಂಗಳಾದ ಕಕಾರಂ ಖಕಾರಂ ಗಕಾರಂಗಳಂ
ಪರಿವಿಡಿಯಿಂ ನ್ಯಾಸಮಂ ಮಾಡಿ ಭಾವಿಪುದೆಂದೆಯಯ್ಯಾ,
ತ್ರಿಪುರಾಪಹಾರ ಪರಮ ಶಿವಲಿಂಗೇಶ್ವರ.
Art
Manuscript
Music
Courtesy:
Transliteration
Mattamāyagnindu sūrya san̄jñika
maṇḍalatrayada daḷaṅgaḷalli,
taradiṁ pradakṣiṇadiṁ mūḍantoḍagiyagni
maṇḍalada pūrvadaḷadalli,
bindu san̄jñikavāda sakāramanadarāceya
candramaṇḍalada pūrvadaḷadalli
tatvabīja san̄jñikavādakāramaṁ
mūrtibīja san̄jñikamādākāramumanindrāgnigaḷapa
dikkinoḷbarevudu.
Sūryamaṇḍalada pūrvadaḷadoḷumā indrāgnigaḷapadikkina
daḷaṅgaḷalliyuṁ,
bhāvasan̄jñikaṅgaḷāda kakāraṁ khakāraṁ gakāraṅgaḷaṁ
pariviḍiyiṁ n'yāsamaṁ māḍi bhāvipudendeyayyā,
tripurāpahāra parama śivaliṅgēśvara.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ