Index   ವಚನ - 71    Search  
 
ಮತ್ತಮಗ್ನಿಮಂಡಲದಗ್ನಿದಿಕ್ಕಿನೇಕದಳದಲ್ಲಿ ಷಕಾರಮಂ ಅದರಾಚೆಯ ಚಂದ್ರಮಂಡಲದ ದಳದ್ವಯದಗ್ನಿದಳದಲ್ಲಿ ಇಕಾರಮಂ ಅಗ್ನಿಯಮರಪದಿಕ್ಕಿನೊಳೀಕಾರಮುಮಂ ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿಯಗ್ನಿದಳದೊಳ್ಘಕಾರಮಂ ಅಗ್ನಿಯಮರಪದೆಶೆಯ ದಳಂಗಳಲ್ಲಿ ಙಕಾರ ಚಕಾರಂಗಳಂ ನ್ಯಾಸೀಕರಿಸಿ ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗ ಪರ್ವತಾತ್ಮಭವೋತ್ಸಂಗ.