Index   ವಚನ - 73    Search  
 
ಮರಲ್ದುಮಗ್ನಿಮಂಡಲದ ನೈಋತ್ಯದಿಕ್ಕಿನೇಕದಳದಲ್ಲಿ ವಕಾರ ಮನದರಾಚೆಯ ಚಂದ್ರಮಂಡಲದ ನೈರುತ್ಯದಿಕ್ಕಿನ ದಳದ್ವಯದ ನೈಋತ್ಯದಳದಲ್ಲಿ ಋಕಾರಮಂ, ನೈಋತ್ಯ ವರುಣರಪದಿಕ್ಕಿನ ದಳದಲ್ಲಿ ಋಕಾರಮಂ ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ ನೈಋತ್ಯ ದಳದೊಳಗೆ ಇಕಾರಮಂ ನೈಋತ್ಯ ವರುಣರಪದಿಕ್ಕಿನ ದಳದ್ವಯದಲ್ಲಿ ಟಕಾರ ಠಕಾರಂಗಳಂ ನ್ಯಸ್ತಂಗೆಯ್ದು ಭಾವಿಪುದೆಂದೆಯಯ್ಯಾ, ಪರಿಪೂರ್ಣ ಪರಮ ಶಿವಲಿಂಗೇಶ್ವರ.