Index   ವಚನ - 72    Search  
 
ಮೇಣ್, ಅಗ್ನಿಮಂಡಲದ ಯಮದಿಕ್ಕಿನೇಕದಳದಲ್ಲಿ ಶಕಾರಮನದರಾಚೆಯ ಚಂದ್ರಮಂಡಲದ ದಳದ್ವಯದೊಳಗೆ ಯಮದಿಕ್ಕಿನ ದಳದಲ್ಲಿ ಉಕಾರಮಂ, ಯಮ ನೈಋತ್ಯರಪದಿಕ್ಕಿನ ದಳದಲ್ಲಿ ಊಕಾರಮುಮನದರಾಚೆಯ ಸೂರ್ಯಮಂಡಲದ ಯಮದಿಕ್ಕಿನ ದಳತ್ರಯದೊಳಗೆ ಯಮದಳದಲ್ಲಿ ಛಕಾರಮಂ, ಯಮ ನೈಋತ್ಯರಪದಿಕ್ಕಿನ ದಳದ್ವಯದಲ್ಲಿ ಜಕಾರ ಝಕಾರಂಗಳನಿಟ್ಟು ಭಾವಿಪುದೆಂದುಪದೇಶಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ.