ಕ್ಷಕಾರಂ ವಿದ್ಯಾತತ್ವಾತ್ಮಕ ಜ್ಞಾನಶಕ್ತಿಸ್ವರೂಪಮಾದ ಕಾರಣ
ಕರ್ಣಿಕಾಸ್ಥ ಹಕಾರಸವಿೂಪ ದಳದಲ್ಲಿ ನ್ಯಸ್ತವಾಯಿತ್ತು.
ಮಧ್ಯದ ಚಂದ್ರಮಂಡಲದ ಪೂರ್ವದಳಾದಿಯಾಗಿ
ಅ ಆ ಇ ಈ ಉ ಊ ಋ ಋ ೠ ಌ ೡ ಏ ಐ ಓ ಔ ಅಂ ಅಃ
ಎಂಬೀತರದಿಂ ತತ್ವಾಖ್ಯ ಮೂರ್ತಾಖ್ಯಂಗಳೆನಿಪ
ಹ್ರಸ್ವ ದೀರ್ಘಂಗಳಾದ ಷೋಡಶ ಸ್ವರಂಗಳಿರ್ಪುವೆಂದು
ನಿರವಿಸಿದೆಯಯ್ಯಾ,
ನಿರಾಳಮೂರ್ತಿ ನಿಸ್ತುಳ ಪರಮ ಶಿವಲಿಂಗೇಶ್ವರ.
Art
Manuscript
Music Courtesy:
Video
TransliterationKṣakāraṁ vidyātatvātmaka jñānaśaktisvarūpamāda kāraṇa
karṇikāstha hakārasaviūpa daḷadalli n'yastavāyittu.
Madhyada candramaṇḍalada pūrvadaḷādiyāgi
a ā i ī u ū r̥ r̥ r̥̄ l̥ l̥̄ ē ai ō au aṁ aḥ
embītaradiṁ tatvākhya mūrtākhyaṅgaḷenipa
hrasva dīrghaṅgaḷāda ṣōḍaśa svaraṅgaḷirpuvendu
niravisideyayyā,
nirāḷamūrti nistuḷa parama śivaliṅgēśvara.