Index   ವಚನ - 81    Search  
 
ಇಂತು ಮಧ್ಯವೃತ್ತದ ದಳಾಪದಳಂಗಳಲ್ಲಿ ನ್ಯಾಸಮಾದ ಪದಿನಾರಕ್ಕರಂಗಳ ಎಸಳುಗಳಲ್ಲಿ ಪೂರ್ವದಳಾದಿಯಾಗಿ ಕಖಗಘಙ ಚಛಜಝಞ ಟಠಡಢಣ ತಥದಧನ ಪಫಬಭ ಎಂಬಿಪ್ಪತ್ತುನಾಲ್ಕು ದಳಾಕ್ಷರನ್ಯಾಸಮಾದುದು. ಮಕಾರವೆ ಯಕಾರ ಸವಿೂಪವರ್ತಿಯಾದಕಾರಣ- ಮಗ್ನಿಮಂಡಲದಳನ್ಯಸ್ತವಾಯಿತ್ತದು ಗೂಡಿ ಸ್ಪರ್ಶಾಕ್ಷರಂಗಳಿರ್ಪತ್ತೈದಾಯಿತ್ತೆಂದೆಯಯ್ಯಾ, ಪರಮ ಶಿವಲಿಂಗೇಶ್ವರ.