ಬಳಿಕ್ಕಮೀ ಚಕ್ರಸ್ಥ ವರ್ನಂಗಳ್ಗೆ ವರ್ಗಭೇದಮುಂಟದೆಂತೆನೆ-
ಸ್ಥಿತಿವರ್ಗ ಸೃಷ್ಟಿವರ್ಗ ಸಂಹಾರವರ್ಗಂಗಳೆಂಬೀ ವರ್ಗಂಗಳವರಲ್ಲಿ
ಮೊದಲ ಸ್ಥಿತಿವರ್ಗವೊಂದರೊಳಗೆ
ಸಾತ್ವಿಕವರ್ಗ ರಾಜಸವರ್ಗ ತಾಮಸವರ್ಗಂಗಳಕ್ಕುಮಿವಕ್ಕೆ ವಿವರಂ-
ಪೂರ್ವಾದೀಶಾನಾಂತಮಾಗಿ ಅಗ್ನಿ ಚಂದ್ರ ಸೂರ್ಯಮಂಡಲದಳ
ನ್ಯಸ್ತಾಕ್ಷರಗಳೆಲ್ಲಂ ಸ್ಥಿತಿವರ್ಗ ವಿವರೊಳ್ಸಾತ್ವಿಕವರ್ಗ
ರಾಜಸವರ್ಗ ತಾಮಸವರ್ಗಗಳೆಂದು ತ್ರಿವಿಧಮಪ್ಪವರಲ್ಲಿ
ಮೊದಲಗ್ನಿಮಂಡಲದೆಂಟು ದಳಂಗಳಲ್ಲಿಯ
ಸ ಷ ಶ ವ ಲ ರ ಯ ಮ
ಗಳೆಂಬಿವೆಂಟು ಸಾತ್ವಿಕಂಗಳೆನಿಪ ವದರಾಚೆಯ
ಚಂದ್ರಮಂಡಲದ ದಳೋಪದಳಂಗಳಲ್ಲಿ
ಪೂರ್ವಾದೀಶಾನಾಂತಮಾಗಿ ನ್ಯಸ್ತವಾದ
ಅ ಆ ಇ ಈ ಉ ಊ ಌ ೡ ಏ ಐ ಓ ಔ ಅಂ ಅಃ
ಎಂಬೀ ಪದಿನಾರೆ ರಾಜಸಂಗಳೆನಿಪ-
ವದರಾಚೆಯ ಸೂರ್ಯಮಂಡಲದ ಮೂವತ್ತೆರಡು ದಳಂಗಳೊಳಗ-
ಣೆಂಟಕ್ಕರಂಗಳಗ್ನಿ ಮಂಡಲದೆಂಟುದಳಂಗಳಲ್ಲಿ
ನ್ಯಸ್ತವಾಗಿರ್ದಪವವರ,
ಶೂನ್ಯದಳಂಗಳೆಂಟಂ ಬಿಟ್ಟುಳಿದಿರ್ಪತ್ತು ನಾಲ್ಕು ದಳಂಗಳಲಿ
ನ್ಯಸ್ತವಾದ
ಕಖಗಘಙ ಚಛಝಜಞ ಟಠಡಢಣ
ತಥದಧನ ಪಫಬಭಂಗಳೆಂಬಿರ್ಪತ್ತನಾಲ್ಕೆ ತಾಮಸಂಗಳೆನಿಪವೀ
ವರ್ಗತ್ರಯಂ ಸ್ಥಿತಿವರ್ಗಗತವಾದುದೀ ಮೂರ್ಮೂರ್ವರ್ಗಾಕ್ಷರಂಗಳ
ಸಂಜ್ಞೆಯಿಂದೆ ಮಂತ್ರಗಳನುದ್ಧರಿಪು ದಿನ್ನುಂ
ಶುದ್ಧಪ್ರಸಾದ ಮೂಲಪ್ರಸಾದ ತತ್ವಪ್ರಸಾದ ಆದಿಪ್ರಸಾದ
ಆತ್ಮಪ್ರಸಾದಂಗಳೆಂಬ
ಪಂಚಪ್ರಸಾದ ಮಂತ್ರಗಳನೀ ಚಕ್ರಸ್ಥಾಕ್ಷರ ಸ್ಥಿತಿವರ್ಗದಿಂದುದ್ಧರಿಸಿ
ಭಾವಿಪುದೆಂದೆಯಯ್ಯಾ,
ಪರಮ ಶಿವಲಿಂಗೇಶ್ವರ ಸುಧಾಕರ ಶೇಖರ.
Art
Manuscript
Music
Courtesy:
Transliteration
Baḷikkamī cakrastha varnaṅgaḷge vargabhēdamuṇṭadentene-
sthitivarga sr̥ṣṭivarga sanhāravargaṅgaḷembī vargaṅgaḷavaralli
modala sthitivargavondaroḷage
sātvikavarga rājasavarga tāmasavargaṅgaḷakkumivakke vivaraṁ-
pūrvādīśānāntamāgi agni candra sūryamaṇḍaladaḷa
n'yastākṣaragaḷellaṁ sthitivarga vivaroḷsātvikavarga
rājasavarga tāmasavargagaḷendu trividhamappavaralli
modalagnimaṇḍaladeṇṭu daḷaṅgaḷalliya
sa ṣa śa va la ra ya ma
gaḷembiveṇṭu sātvikaṅgaḷenipa vadarāceya
candramaṇḍalada daḷōpadaḷaṅgaḷalli
Pūrvādīśānāntamāgi n'yastavāda
a ā i ī u ū l̥ l̥̄ ē ai ō au aṁ aḥ
embī padināre rājasaṅgaḷenipa-
vadarāceya sūryamaṇḍalada mūvatteraḍu daḷaṅgaḷoḷaga-
ṇeṇṭakkaraṅgaḷagni maṇḍaladeṇṭudaḷaṅgaḷalli
n'yastavāgirdapavavara,
śūn'yadaḷaṅgaḷeṇṭaṁ biṭṭuḷidirpattu nālku daḷaṅgaḷali
n'yastavāda
kakhagaghaṅa cachajhajaña ṭaṭhaḍaḍhaṇa
tathadadhana paphababhaṅgaḷembirpattanālke tāmasaṅgaḷenipavī
Vargatrayaṁ sthitivargagatavādudī mūrmūrvargākṣaraṅgaḷa
san̄jñeyinde mantragaḷanud'dharipu dinnuṁ
śud'dhaprasāda mūlaprasāda tatvaprasāda ādiprasāda
ātmaprasādaṅgaḷemba
pan̄caprasāda mantragaḷanī cakrasthākṣara sthitivargadindud'dharisi
bhāvipudendeyayyā,
parama śivaliṅgēśvara sudhākara śēkhara.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ