Index   ವಚನ - 88    Search  
 
ತ್ರಯೋದಶ ನಾಮಕ್ಕೆ ವಿವರವೆಂತೆನೆ ಸೂಕ್ಷ್ಮವಾಗಿ ಘೋಷಮಮಯವಾದುದರಿಂ ನಾದಂ. ಚರಾಚರಾದಿ ಜೀವ ಹೃದಯಸ್ಥ ಚೈತನ್ಯಮಪ್ಪುದರಿಂ ಗುಹ್ಯ. ಮೂರ್ತಿ[ಯ]ದತ್ತಣಿನುತ್ತೀರ್ಣಮಾದುದರಿಂದ ಪರ ಮಿನ್ನೊಂದು ತೆರದಿಂ ಸ್ಥೂಲ ಸೂಕ್ಷ್ಮ ಪರಮೆಂದು ಮೂದೆರನದರೊಳ್ವ ಎಂಬ ಶಬ್ದಂ ಸ್ಥೂಲಂ ಚಿಂತಾಮಯಂ ಸೂಕ್ಷ್ಮಂ ಶಬ್ದಂ ಚಿಂತಾರಹಿತತೆಯೆ ಪರಂ ಜೀವವೆಂದು ಕಲ್ಪಿತ ಚಿತ್ತಾದ್ವೈತನಾದ ಶಿವಂ ಜೀವತ್ವವನಂಗೀಕರಿಸದಿರ್ದೊಡೆ ಪ್ರಪಂಚವೇನುವಿಲ್ಲವೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ ಪ್ರಭಾಮಯ ಕಳೇವರ.