Index   ವಚನ - 91    Search  
 
ಮತ್ತಮಾ ಶುದ್ಧಪ್ರಸಾದಂ ಪೃಥ್ವೀಲಯಮುದಕದಲ್ಲಿ ಉದಕದ ಲಯಮಗ್ನಿಯಲ್ಲಿ ಅಗ್ನಿಯ ಲಯ ವಾಯುವಿನಲ್ಲಿ ವಾಯು ಲಯಮಾಕಾಶದಲ್ಲಿಯಪ್ಪುದರಿಂದಾಕಾಶಂ ಸರ್ವಾಶ್ರಯಮುಮಪ್ಪುದದು ಕಾರಣದಿಂ ಭೂತಾಂತವೆನಿಪುದಿನ್ನು ಸಮಸ್ತ ವರ್ನಂಗಳಂ ಮುಸುಂಕಿಕೊಂಡು ಪ್ರಭಾವಾನ್ವಿತದಿಂ ಶಿವಾರ್ನಮೆನಿಕುಂ. ಮತ್ತಂ ವಾಙ್ಮನೋತೀತ ಭಾವತ್ವದಿಂ ಶೂನ್ಯವೆನಿಪುದು. ಬಳಿಕ್ಕಂ, ಜಗತ್ತು ತನ್ನಿಂದುದಿಸಿರ್ದು ಲಯವನೆಯ್ದಿದೊಡಂ ಸಾಗರ ತರಂಗ ನ್ಯಾಯದಿಂ ಕ್ಷಯಾಭಿವೃದ್ಧಿಗಳ್ತನಗಿಲ್ಲದೆ ಸರ್ವತೋಭದ್ರಮಾಗಿ ಕೇಡಿಲ್ಲದಿರ್ಪುದರಿಂದವ್ಯಯಮಾದುದಿಂತು ನಾದ ಗುಹ್ಯ ಪರ ಜೀವ ದೇಹಿ ಭೂತ ಪಂಚಮ ಸಾಂತ ತತ್ವಾಂತ ಶಿವಾರ್ನ ಶೂನ್ಯ ವ್ಯಯಂಗಳೆಂಬೀ ತ್ರಯೋದಶವಿಧಾಭಿಧಾನ ಪರ್ಯಾಯವನುಳ್ಳ ಕರ್ಣಿಕಾಬೀಜವಾದ ಶುದ್ಧಪ್ರಸಾದಮಂ ನಿರವಿಸಿದೆಯಯ್ಯಾ, ನಿರಂತರ ಪರಮ ಶಿವಲಿಂಗೇಶ್ವರಾ.