Index   ವಚನ - 94    Search  
 
ಮರಲ್ದುಮೆರಡನೆಯ ಚಂದ್ರಮಂಡಲದಳೋಪದಳ ಷೋಡಶಂಗಳಲ್ಲಿ ಪೂರ್ವಾದಿಶಾನಾಂತ ದಳನ್ಯಸ್ತ ಷೋಡಶ ಸ್ವರಂಗಳೊಳ್ಮೊದಲಕಾರ ನಾಮಂಗಳಂ ಪೇಳ್ವೆನೆಂತೆನೆ- ಆದಿಬೀಜವೆಂದು ವರ್ಣಾದಿಯೆಂದು ವರ್ಗಾದಿಯೆಂದ ಕಲಾದಿಯೆಂದು ಸ್ವರಾದಿಯೆಂದು ಮಾತ್ರಾದಿಯೆಂದು ಪ್ರಕೃತಿಯೆಂದು ಜೀವಾದಿಯೆಂದು ಕಲೆಯೆಂದು ಮಾತ್ರೆಯೆಂದು ಆದಿಯೆಂದು ಸ್ವರವೆಂದೀ ಯಕಾರ ಪರ್ಯಾಯನಾಮಂಗಳು ಪೇಳ್ದಿನ್ನುಳಿದ ಸ್ವ ಪರ್ಯಾಯ ನಾಮಂಗಳ ಬಾಹುಲ್ಯ ಭಾರದಿಂ ಪೇಳ್ದುದಿಲ್ಲಮಂತೆಯೆ ಸೂರ್ಯಮಂಡಲ ದಳ ಲಿಪಿ ನಾಮ ಪರ್ಯಾಯಂಗಳುಮಂ ನಿರವಿಸಲಿಲ್ಲಮಿವೆಲ್ಲಮಂ ಮಂತ್ರಾಗಮಂಗಳಲ್ಲಿ ನೋಡಿಕೊಂಬುದಿಲ್ಲಿಯದು ಪ್ರಾಪಂಚಿಕವೆಂದುಳಿದತಿ ಸೂಕ್ಷ್ಮವನೆ ಬೋಧಿಸಿದೆಯಯ್ಯಾ. ಪರಾತ್ಪರ ಪರಮ ಶಿವಲಿಂಗೇಶ್ವರ.