Index   ವಚನ - 95    Search  
 
ಮತ್ತೆಯುಂ ಸಮಸ್ತ ಕಾರ್ಯ ವಿಸ್ತಾರಮಯ ತ್ರಿಪುಟಿರೂಪ ವಿಶ್ವವೆಲ್ಲಂ ಮಂತ್ರಾಧಾರದೊಳಿರ್ದ ಕಾರಣಮಿದೆಲ್ಲಂ ಮಂತ್ರಾತ್ಮಕಮಾಗಿಯೆ ತಿಳಿವುದಾ ಮಂತ್ರ ಸ್ವರೂಪಮಾದೊಡೆ ಪರಾರ್ಧಕೋಟಿ ಸಂಖ್ಯೆಯಿಂದೆ ಕೂಡಿ ನಾದಬ್ರಹ್ಮಸ್ವರೂಪ ಪರಮಶಿವ ವದನಾರವಿಂದದತ್ತಣಿಂ ನಿರ್ಗತಮಾದುದರಿಂವಿನಾ ಯಾವ ಕ್ರಿಯೆಯುಮಿಲ್ಲಂ. ಸರ್ವವುಂ ವಂತ್ರಮಯವೆಂದೆ ನಿರವಿಸಿದೆಯಯ್ಯಾ, ಶರಣಾಂತರಂಗ ಶಯ್ಯ ಪರಮ ಶಿವಲಿಂಗಯ್ಯ.