Index   ವಚನ - 97    Search  
 
ಬಳಿಕಂ ಪೂರ್ವೋಕ್ತ ಚಕ್ರಪ್ರಸಿದ್ಧ ಪ್ರಸಾದಮಂತ್ರವಾದೊಡೆ ಪ್ರಯೆನಲೊಡಂ ಶಿವಂ, ಸಾಯೆನಲೊಡಂ ಶಕ್ತಿ, ದಯೆನಲೊಡಂ ಶಿವಶಕ್ತಿಗಳೈಕ್ಯಂ. ಮತ್ತೆಯುಂ, ಪ್ರಸಾದ ಎಂದೊಡೆ ತರದಿಂ ಶಿವಶಕ್ತ್ಯಾತ್ಮಕವಾದ ಮುಕ್ತಿ ಭುಕ್ತಿಗಳಂ ಕೊಟ್ಟಪುದೆಂದವಯವಾರ್ಥಂ. ಮರಲ್ದುಮಜ್ಞಾನ ಜ್ಞಾನ[ಜ್ಞೇಯ]ಗಳೆಂದು ಮೂದೆರನಿವಕ್ಕೆ ತರದಿಂ ವಿವರಮದೆಂತೆನೆ- ಕಳ್ತಲೆಯಂತಿರ್ಪುದೆ ಅಜ್ಞಾನಂ. ಬೆಳಗಿನಂತಿರ್ಪುದೆ ಜ್ಞಾನಮಾ- ಬೆಳಗಿನಿಂ ತಿಳಯಲ್ತಕ್ಕ ಸೂರ್ಯನಂತಿರ್ಪುದೆ ಜ್ಞೇಯಮಿಂತು ಕನಸಿನಂತೆ ಕಲ್ಪಿತಮದಜ್ಞಾನಾಪಹಾರಿಯಾದ ಸಮ್ಯಜ್ಞಾನದೀಪ್ತಿ ದೀಪ್ತವಾಗಿ ಯಗ್ಯುಷ್ಣದಂತವಿನಾಭಾವವಾದ ಶಿವಶಕ್ತ್ಯಾತ್ಮಕವಾದ ಪರವಸ್ತುವೆ ಬೆಳಗಿಂ ಸೂರ್ಯನೆಂತಂತೆ ಸ್ವಕೀಯ ಚಿಚ್ಛಕ್ತಿಯಿಂ ಪ್ರಕಟಿತಮಾದಪುದಂತೆ `ಜ್ಞಾನಾದೇವ ತು ಕೈವಲ್ಯಂ' ವೆಂಬುದರಿಂದೆ ಕೇವಲಜ್ಞಾನ ಸದ್ರೂಪಮೆ ಶುದ್ಧಪ್ರಸಾದವೆಂದು ನಿರವಿಸಿದೆಯಯ್ಯಾ, ಶಿವಾಂತರಂಗ ಪರಶಿವಲಿಂಗ.