Index   ವಚನ - 102    Search  
 
ಮೇಣಾ ಮಂತ್ರಮೂರ್ತಿಗೆ ನಾದವೆ ಕಿರೀಟಮದೆಂತೆನೆ ಯಾ ಪರಶಿವನ ನಿಷ್ಕಳಶಕ್ತಿಯದೆ ನಾದವದೆಯಾದಿಶಕ್ತಿಯದೆ ಓಂಕಾರವದರುತ್ಪತ್ತಿಯೆಂತೆನೆ ಅಕಾರವೆ ನಾದ ಉಕಾರವೆ ಬಿಂದುವುಭಯಂಗೂಡಿ ಅವು `ಓ ಭವತಿ'ಯೆಂದೊಂದೆಯಾಗಿ ಓ ಎನಿಸಿತ್ತದರಂತೆ ಆ ಓ ಕೂಡಿ ಔಯೆನಿಸಿತ್ತು ಹಾಂಗೆಯೆ ಆ ಇ ಕೂಡಿ ಎ ಎನಿಸಿತ್ತದರಂತೆ ಅ ಏ ಕೂಡಿ ಐ ಏ ಓ ಔ ಯೆಂಬೀ ಚತುರಕ್ಷರಂಗಳ್ರೂಪಾಂತರದಿಂ ಸಂಧ್ಯಕ್ಷರಂಗಳೆನಿಸುಗುಮವರೋಳ್ ಓಕಾರವೆ ಆದಿಶಕ್ತಿಯ ಧ್ವಜಾಕಾರ ರೇಖೆಗಳೆ, ಈ ಮೂಲಪ್ರಸಾದ ಮಂತ್ರಮೂರ್ತಿಯ ಕಿರೀಟವೆಂದು ನಿರವಿಸಿದೆಯಯ್ಯಾ,ಪರಶಿವಲಿಂಗೇಶ್ವರ.