Index   ವಚನ - 101    Search  
 
ಬಳಿಕ್ಕಮೀ ಮೂಲಪ್ರಸಾದವೆ ಶಿವನೀ ವೈದಿಕ ಪ್ರಸಾದಮಂತ್ರ ಮೂರ್ತಿಯೆಂತೆನೆ, ಹಕಾರವೆ ದೇಹ, ಬಿಂದುವೆ ಮುಖಮೆಂಬಲ್ಲಿ ಆ ಪರಶಿವನ ನಿಷ್ಕಲಶಕ್ತಿಯೆನಿಪ ಷಾಂತವೆ ಬಿಂದು ತದಂಶಗಳಾದ ವ್ಯಂಜನಂಗಳುಮಂತೆಯೆ. ಬಳಿಕಲಾ ಶಾಂತ್ಯತೀತ ಕಳಾಮಯಿಯಾದ ನಿಷ್ಕಳ ಪರಾಶಕ್ತಿಯ ಭೋಗಾಧಿಕಾರಿಗಳಾದ ಶಿವ ಸದಾಶಿವ ಮಾಹೇಶ್ವರರ ವ್ಯಾಪಾರಕ್ಕೆ ಶುದ್ಧ ಮಾರ್ಗೋಪಾಧಿಯಾಗಿ ಪ್ರಕಾಶ ಬ್ರಹ್ಮಾಧಿಷ್ಠಾನ ರೂಪಿಣಿಯಾದ ಕುಂಡಲಿನಿಯೆನಿಸಲಾ ಕುಂಡಲಿನಿಯೆ ಬಿಂದುವದೆ ಶೂನ್ಯವದೆ ಸೊನ್ನೆಯದೆ ಪರಶಿವನ ಲೀಲಾವ್ಯಾಪಾರಂಗಳ್ಗೆ ಮುಖ್ಯ[ವ]ಪ್ಪುದರಿಂ ಬಟ್ಟಿತ್ತಾದ ಸೊನ್ನೆಯದುವೆ ಹಿಂಗೆ ಮೇಲಿರುತಿರ್ದ ಕಾರಣವದೆ ಮೂಲಪ್ರಸಾದಮಂತ್ರ ಮೂರ್ತಿಯ ಮುಖವೆಂದುಪದೇಶಿಸಿದೆಯಯ್ಯಾ, ಪರಶಿವಲಿಂಗೇಶ್ವರ ಚಿದ್ಗಗನ ಪ್ರಭಾಕರ.