Index   ವಚನ - 104    Search  
 
ಮತ್ತೆಯುಮೀ ಶಿವಬೀಜಂ ಸ್ಥೂಲ ಸೂಕ್ಷ್ಮಪರಂಗಳೆಂದು ಮೂದೆರನಾಗಿರ್ಪುದಿದಕ್ಕೆ ವಿವರಂ- ಸ್ಥೂಲಮೆನೆಯಕ್ಕರಂ. ಸೂಕ್ಷ್ಮಮೆನೆಯಾಯಕ್ಷರದ ದನಿ. ಪರಮೆನೆ ಆಕಾರಾದಿ ಕ್ಷಕಾರಾಂತವಾದೈವತ್ತಕ್ಕರಂಗಳೊಳಗೆ ಪತ್ತು ಪತ್ತುಗಳು ವಿಭಾಗಿಸಿ, ಭೂಮ್ಯಾದಿ ಪಂಚಭೂತಂಗಳೊಡನೆ ಕಲಸುವುದೆಂತೆನೆ ತರದಿಂ ಅ ಆ ಇ ಈ ಉ ಊ ಋ ೠ ಌ ೡ ಈ ಹತ್ತು ಪೃಥ್ವಿ. ಏ ಐ ಓ ಔ ಅಂ ಅಃ ಕ ಖ ಗ ಘ ಈ ಹತ್ತು ಅಪ್ಪು. ಙ ಚ ಛ ಜ ಝ ಞ ಟ ಠ ಡ ಢ ಈ ಹತ್ತು ತೇಜಸ್ಸು. ಣ ತ ಥ ದ ಧ ನ ಪ ಫ ಬ ಭ ಈ ಹತ್ತು ವಾಯು. ಮ ಯ ರ ಲ ವ ಶ ಷ ಸ ಹ ಳ ಯೀ ಹತ್ತು ಆಕಾಶಂ. ಇಂತೈವತ್ತಕ್ಕರಂಗಳೈದು ಪೃಥ್ಯಪ್ತೇಜೋವಾಯ್ವಾಕಾಶಂಗಳಲ್ಲಿ ನ್ಯಸ್ತಂಗಳಾದವಿನ್ನುಳಿದೈದನೆಯ ಭೂತಸಂಜ್ಞಿಕದಿಂ ಪಂಚಮವೆನಿಸಿದ ಪರಿಪೂರ್ಣವಾದ ಸಾಂತವೆ ಪರಮಿಂತು ಸ್ಥೂಲ ಸೂಕ್ಷ್ಮ ಪರ ಸಂಜ್ಞೆಯ ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗ ಪಾರ್ವತೀ ಸಮುತ್ಸಂಗ.