Index   ವಚನ - 108    Search  
 
ಬಳಿಕ್ಕಾದಿಪ್ರಸಾದ ನಿರೂಪಣಾನಂತರದಲ್ಲಿ- ಯಾತ್ಮಪ್ರಸಾದಮಂ ಪೇಳ್ವೆನೆಂತೆನೆ- ಭೂತಾಂತ ಸಂಜ್ಞೆಯನುಳ್ಳ ಹ್ ಎಂಬಕ್ಕರಕ್ಕದೇ ಪ್ರಕೃತಿಸಂಜ್ಞೆಯನುಳ್ಳ ಆಕಾರಮಂ ಪತ್ತಿಸೆ ಹ ಎಂಬುದಾಯ್ತು. ಮತ್ತಮಗ್ನಿಮಂಡಲದ ಸಾತ್ವಿಕವರ್ಗದಿಂದ್ರದಳದ ಸ್ ಎಂಬ ವ್ಯಂಜನಕ್ಕಾದಿ ಪ್ರಕೃತಿಯಂ ಕೂಡಿಸೆ ಸ ಎನಿಸಲೊ[ಡಿನ್ನ]ವರ ಮಧ್ಯದೊಳ್ಯಕ್ತಿ ಸಂಜ್ಞಿತವಾದ ಸೊನ್ನೆಯನುದ್ಧರಿಸೆ ಹಂಸ ಎಂದಾಯ್ತದೆ ಆತ್ಮಪ್ರಸಾದವೆನಿಸಿತ್ತದೆ ಸರ್ವರ ಹೃದ್ಗತವಾಗಿ ಜೀವಪ್ರಸಾದವಾದುದೆಂದು ತಿಳಿಪಿದೆಯಯ್ಯಾ, ಪರಮಗುರು ಪರಾತ್ಪರ ಪರಶಿವಲಿಂಗೇಶ್ವರ.