Index   ವಚನ - 113    Search  
 
ಇಂತಷ್ಪಾಕ್ಷರಮಂತ್ರ ನಿರೂಪಣಾನಂತರದಲ್ಲಿ ನವಾಕ್ಷರ ಮಂತ್ರಮಂ ಪೇಳ್ವೆನೆಂತೆನೆ- ಭೂತಾಂತ ಸಂಜ್ಞಿತ ಹಕಾರಮನುದ್ಧರಿಸಿ ಸ್ವರ ತ್ರಯೋದಶಾಂತದೊಡನೆ ಕೂಡಲ್ ಹೌ ಎನಿಸಿತ್ತು. ಸಂಜ್ಞಿತವಾದಕಾರದೊಡನೆ ಕೂಡೆ ಹ ಎನಿಸಿತ್ತು. ಹೌ ಹ ಎಂಬಿವೆರಡು ಶಕ್ತಿ ಸಂಜ್ಞಿತವಾದ ಬಿಂದುವಂ ಬೆರಸೆ ಹೌಂ ಹಂ ಎಂದೆನಿಸಿದವು. ಶಕ್ತಿ ಸಂಜ್ಞಿಕವಾದ ಸ್ ಎಂಬ ವ್ಯಂಜನಂ ಮಾತ್ರಾಸಂಜ್ಞಿತವಾದ ಕಾರಮನೊಂದೆ ಸ ಎನಿಸಿ- ತೇಳನೆಯ ವರ್ಗಾಂತ್ಯಾಕ್ಷರವಾದ ವ್ ಎಂಬುದಂ ಪೀಂದೇಳ್ದ ಸಕಾರದ ಪೂರ್ವದೊಳಿಡೆ ಸ್ವ ಎನಿಸಿತು. ವಾಯುವರ್ಗದ ಕಡೆಯ ಮ್ ಎಂಬುದನಾದಿಭೂತ ಸಂಜ್ಞಿತಮಾದಾಕಾಶ ವರ್ಗಾಂತ್ಯವಾದಕಾರದೊಡನೆ ಕೂಡೆ ಮ ಎನಿಸಿತ್ತು. ಲಯ ವರ್ಗದಾದಿಯ ಕ್ಷಕಾರಮಂ ವರುಣವರ್ಗದಾದಿಯ ತಕಾರಮುಮನುದ್ಧರಿಸಿ ಯವೆರಡರ ನಡುವೆ ಯಾಂತವಾದಾ ರ್ ಎಂಬ ಎಂಬ ವ್ಯಂಜನಮನಾದಿಬೀಜ ಸಂಜ್ಞಿತವಾದಕಾರದೊಡನೆ ಕೂಡೆ ರ ಎನಿಸಿತಿಂತು ಕ್ಷ ರ ತ ಎನಿಸಿದವು. ಸಪ್ತಮವರ್ಗದಾದಿಯಾದ ಯ್ ಎಂಬಕ್ಕರವನಾದಿಸಂಜ್ಞಿತವಾದ ಕಾರದೊಡನೆ ಕೂಡೆ ಯ ಎನಿಸಿತ್ತಾರನೆಯ ವಾಯುವರ್ಗಾಂತವಾದ ಮ್ ಎಂಬಕ್ಕರ ಮನಾದಿಸಂಜ್ಞಿತವಾದ ಕಾರದೊಡನೆ ಬೆರಸೆ ಮ ಎನಿಸಿ, ಒಂಬತುಮಮಂ ಬಿಂದು ನಾದಸಂಜ್ಞಿತವಾದ ಸೊನ್ನೆಯಂ ಕೂಡಿಸೆ, ಹೌಂ ಹಂ ಸ್ವಂ ಮಂ ಕ್ಷಂ ರಂ ತಂ ಯಂ ಮಂ ಎಂಬೀ ನವಾಕ್ಷರ ಮಂತ್ರ ಸರ್ವಸಿದ್ಧಿಪ್ರದ ಶಾಂತಿಕಮಂತ್ರವೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗೇಶ್ವರ ನವಲಿಂಗ ಭಾಸ್ವರ.