ಮತ್ತಂ, ಗುಹ್ಯಮಂ ತ್ರಯೋದಶಾಂತದೊಳ್ಬೆರಸಿ
ಪರಾಪರದೊಳೊಂದಿಸೆ ಹೌಂ ಎಂಬಾದಿಬೀಜಮಾಯ್ತು.
ಮರಲ್ದುಂ, ಹ್ ಎಂಬ ಜೀವಮಂ ವರ್ಗಾದಿಯಾದಕಾರದೊಳ್ಮೇಳ್ಮೇಳಿಸಿ
ಶಕ್ತಿಸಂಜ್ಞಿತ ಬಿಂದುವಂ ಬೆರಸೆ ಹಂ ಎನಿಸಿತ್ತು.
ಬಳಿಕ್ಕಂ, ಶಕ್ತಿಸಂಜ್ಞಿತವಾದ ಸ್ ಎಂಬ ವ್ಯಂಜನಮಂ
ಕಲಾಸಂಜ್ಞಿತವಾದ ಕಾರಣದೊಳ್ಪುದುಗೆ ಸ ಎನಿಸಿತ್ತು.
ಮತ್ತೆಯುಂ, ವ್ಯಂಜನಶಕ್ತಿ ಬೀಜವಾದ ಸ್ ಎಂಬುದು
ಮಾತ್ರಾದಿ ಸಂಜ್ಞಿತಕಾರಮನೊಂದೆ ಎಂದಿನಂತೆ ಸ ಎನಿ[ಸಿ] ತ್ತು.
ಬಳಿಕಂ, ವರುಣವರ್ಗದ ನಾಲ್ಕನೆ ಯ ಎಂಬಕ್ಕರವುಂ
ಮೂರನೆಯ ಸ್ವರಮನಸ್ಥಿ ಸಂಜ್ಞಿತಮಾದ
ಶ್ ಎಂಬಕ್ಕರದೊಡನೆ ಕೂಡಿಸೆ ಶಿ ಎನಿಸಿತ್ತು.
ಸೋಮಾಂತ ಸಂಜ್ಞಿಕವಾದ ವಕಾರಮಂ
ದ್ವಿಕಲಾಸಂಜ್ಞಿತವಾದಾಕಾರಮ ನೊಂದಿಸೆ ವಾ ಎನಿಸಿತ್ತು.
ವಾಯುಬೀಜವಾದ ಯ್
ಎಂಬಕ್ಕರವನಾದಿಕಲಾಸಂಜ್ಞಿಕ ಮಾದಕಾರದೊಡನೆ ಕೂಡಿಸೆ
ಯ ಎನಿಸಿತ್ತಿಂತು ಹೌಂ ಹಂ ಸ ಸದಾಶಿವಾಯ
ಎಂಬಷ್ಟಾಕ್ಷರಮಂತ್ರಮಂ ನಿರವಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರ.
Art
Manuscript
Music
Courtesy:
Transliteration
Mattaṁ, guhyamaṁ trayōdaśāntadoḷberasi
parāparadoḷondise hauṁ embādibījamāytu.
Maralduṁ, h emba jīvamaṁ vargādiyādakāradoḷmēḷmēḷisi
śaktisan̄jñita binduvaṁ berase haṁ enisittu.
Baḷikkaṁ, śaktisan̄jñitavāda s emba vyan̄janamaṁ
kalāsan̄jñitavāda kāraṇadoḷpuduge sa enisittu.
Matteyuṁ, vyan̄janaśakti bījavāda s embudu
mātrādi san̄jñitakāramanonde endinante sa eni[si] ttu.
Baḷikaṁ, varuṇavargada nālkane ya embakkaravuṁ
mūraneya svaramanasthi san̄jñitamāda
ś embakkaradoḍane kūḍise śi enisittu.
Sōmānta san̄jñikavāda vakāramaṁ
dvikalāsan̄jñitavādākārama nondise vā enisittu.
Vāyubījavāda y
embakkaravanādikalāsan̄jñika mādakāradoḍane kūḍise
ya enisittintu hauṁ haṁ sa sadāśivāya
embaṣṭākṣaramantramaṁ niravisideyayyā,
parama śivaliṅgēśvara.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ