ಬಳಿಕ್ಕಂ, ಶಾಂತಿಕಮಂತ್ರ ನಿರೂಪಣಾನಂತರದಲ್ಲಿ
ಪೌಷ್ಠಿಕಮಂತ್ರಮಂ ಪೇಳ್ವೆನೆಂತೆನೆ-
ಪರಾತ್ಪರಸಂಜ್ಞಿಕವಾದ ಹಕಾರವನುದ್ಧರಿಸಿ,
ಇಂದ್ರವರ್ಗ ಸ್ವರತ್ರಯೋದಶಮಂ ಬೆರಸಿ,
ಕಾರ್ಯಕಾರಣ ಸಂಜ್ಞಿಕವಾದ ಸೊನ್ನೆಯಂ ಕೂಡೆ ಹೌಂ
ಎಂಬಕ್ಕರವಾಯ್ತು. ಶಕ್ತಿಬೀಜಸಂಜ್ಞಿತವಾದ ಸ್ ಎಂಬ ವ್ಯಂಜನಮಂ
ಜೀವಸಂಜ್ಞಿತವಾದಕಾರದೊಡನೆ ಕೂಡೆ ಸ ಎನಿಸಿತು.
ಅವರ ಮುಂದೆ ಮತ್ತೊಂದೀಶವರ್ಗದ ಮೂರನೆಯಕ್ಕರವೆನಿಸುವ
ಸ್ ಎಂಬಕ್ಕರಕ್ಕಂ,
ಮತ್ತೆಯುಮದೇ ವರ್ಗದೆರಡನೆಯ ಷ್ ಎಂಬುದಕ್ಕೆಯುಂ
ಜೀವಸಂಜ್ಞಿತವಾದಕಾರವಂ ಪತ್ತಿಸೆ
ಸ ಷ ಎನಿಸಿದ ವೇಳನೆಯ ವರ್ಗದ ಕಡೆಯಕ್ಕರವಾದ
ವ್ ಎಂಬಕ್ಕರವ
ನದೇ ವರ್ಗದೆರಡನೆಯ ಷಕಾರದೊಳೊಂದಿಸೆ
ಷ್ವ ಎನಿಸಿ-ತ್ತಾರನೆಯ ಸ್ವರದೊಳ್ಮೇಳಿಸೆ ಮೂ ಎನಿಸಿತು.
ಭೂತಾಂತ ಸಂಜ್ಞಿತವಾದ ಹಕಾರವನುದ್ಧರಿಸಿ ಯದರ ಮೇಲೆ
ಅಗ್ನಿ ಸಂಜ್ಞಿತವಾದಾಕರಮಂ ಪತ್ತಿಸೆ ಹ್ರ ಎನಿಸಿ ತ್ತದರ ಮೇಲೆ
ಆರನೆಯ ಸ್ವರಮಂ ಪತ್ತಿಸೆ ಹ್ರೂ ಎನಿಸಿತ್ತು.
ಭಕಾರದ ಕಡೆಯ ವ್ಯಂಜನಮಂ
ದಶಸ್ವರಾಂತರದೊಳ್ಬೆರಸೆ ಮೆ ಎನಿಸಿತ್ತು.
ಪಂಚವರ್ಗಂಗಳೈದನೆಯದಾದ
ನ್ ಎಂಬುದನದರಾರನೆಯ ಮ್ ಎಂಬುದಂ
ಅದರೇಳನೆಯ ಯ್ ಎಂಬುದು
ಸ್ವರಾದಿಯಾದ ಕಾರಣದೊಳ್ಕೂಡಿಸೆ
ತರದಿಂ ನ ಮ ಎನಿಸಿದವಿವಂ ಪರತರ ಸಂಜ್ಞಿವಾದ
ಸೊನ್ನೆಯೊಳ್ಬೆರಸಿ ತರದಿಂದೀ ಪತ್ತಕ್ಕರಮಂ ಕೂಡಿ
ಹೌಂ ಸಂ ಸ್ವಂ ಷ್ವಂ ಮೂಂ
ಹ್ರೂಂ ಮೇಂ ನಂ ಮಂ ಯಂ' ಯೆಂಬೀ
ದಶಾಕ್ಷರ ಮಂತ್ರವೇ ಪೌಷ್ಠಿಕಮಂತ್ರವೆನಿಸಿತ್ತೀ
ಪೂರ್ವೊಕ್ತ ಪಂಚಾಕ್ಷರ ಷಡಕ್ಷರಷ್ಟಾಕ್ಷರ
ನವಾಕ್ಷರ ದಶಾಕ್ಷರಂಗಳನುಳ್ಳ ತರದಿಂ
ಮೋಕ್ಷದಾಭಿವೃದ್ಧಿ ಕಾಮ್ಯ ಶಾಂತಿಕ ಪೌಷ್ಠಿಕಂಗಳೆಂದೀ
ಐದೆರನಾದುದೆ ಸದಾಶಿವಮಂತ್ರವೆಂದೊರೆದೆಯಯ್ಯಾ,
ಪರಮಗುರು ಪರಶಿವಲಿಂಗೇಶ್ವರ.
Art
Manuscript
Music
Courtesy:
Transliteration
Baḷikkaṁ, śāntikamantra nirūpaṇānantaradalli
pauṣṭhikamantramaṁ pēḷvenentene-
parātparasan̄jñikavāda hakāravanud'dharisi,
indravarga svaratrayōdaśamaṁ berasi,
kāryakāraṇa san̄jñikavāda sonneyaṁ kūḍe hauṁ
embakkaravāytu. Śaktibījasan̄jñitavāda s emba vyan̄janamaṁ
jīvasan̄jñitavādakāradoḍane kūḍe sa enisitu.
Avara munde mattondīśavargada mūraneyakkaravenisuva
s embakkarakkaṁ,
Matteyumadē vargaderaḍaneya ṣ embudakkeyuṁ
jīvasan̄jñitavādakāravaṁ pattise
sa ṣa enisida vēḷaneya vargada kaḍeyakkaravāda
v embakkarava
nadē vargaderaḍaneya ṣakāradoḷondise
ṣva enisi-ttāraneya svaradoḷmēḷise mū enisitu.
Bhūtānta san̄jñitavāda hakāravanud'dharisi yadara mēle
agni san̄jñitavādākaramaṁ pattise hra enisi ttadara mēle
āraneya svaramaṁ pattise hrū enisittu.
Bhakārada kaḍeya vyan̄janamaṁ
daśasvarāntaradoḷberase me enisittu.
Pan̄cavargaṅgaḷaidaneyadāda
n embudanadarāraneya m embudaṁ
adarēḷaneya y embudu
svarādiyāda kāraṇadoḷkūḍise
taradiṁ na ma enisidavivaṁ paratara san̄jñivāda
sonneyoḷberasi taradindī pattakkaramaṁ kūḍi
hauṁ saṁ svaṁ ṣvaṁ mūṁ
hrūṁ mēṁ naṁ maṁ yaṁ' yembī
daśākṣara mantravē pauṣṭhikamantravenisittī
Pūrvokta pan̄cākṣara ṣaḍakṣaraṣṭākṣara
navākṣara daśākṣaraṅgaḷanuḷḷa taradiṁ
mōkṣadābhivr̥d'dhi kāmya śāntika pauṣṭhikaṅgaḷendī
aideranādude sadāśivamantravendoredeyayyā,
paramaguru paraśivaliṅgēśvara.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ