ಇಂತು, ಸದಾಶಿವಮಂತ್ರ ನಿರೂಪಣಾನಂತರದಲ್ಲಿ
ಮಹೇಶ್ವರಮಂತ್ರಮಂ ಪೇಳ್ವೆನೆಂತೆನೆ-
ಮಹೇಶ್ವರನೆನೆ ರುದ್ರನಾತನೆ ಸಂಹಾರಕಾರಣನಾತನ
ಮಂತ್ರಮಂ ಸಂಹಾರವರ್ಗಕ್ರಮದಿಂದುದ್ಧರಿಪುದೆನಲದು
ಸೃಷ್ಟಿ ಸ್ಥಿತಿ ಲಯಂಗಳೆಂದು ಮೂದೆರನಾಗಿರ್ಪು- ವವರ
ಮೊದಲ ಸೃಷ್ಟಿವರ್ಗಮದೆಂತೆನೆ,
ಭೂವರ್ಗದ ಮೂರನೆಯಕ್ಕರಮಾದ ಹಕಾರಮನುದ್ಧರಿಸಿ,
ಜಲವರ್ಗದ ಮೊದಲಾದ ಮಕಾರಮನದರೊತ್ತಿನೊಳಿರಿಸಿ,
ಭೂವರ್ಗದೊಂಬತ್ತನೆಯ ದಕಾರಮನವೆರಡರ
ಮುಂದಿ-ಟ್ಟಾಕಾಶವರ್ಗದಾರನೆಯದಾದೆಕಾರಮನದರಿದಿರೊಳ್ಮಡಂಗಿ-
ಯಾಧಾರಾಧೇಯಸಂಜ್ಞಿತವಾದ ಸೊನ್ನೆಯಿಂ ಕೂಡಿಸೆ
ಯೀ ನಾಲ್ಕಕ್ಕರಂಗಳ್
ಹಂ ಮಂ ದಂ ಎಂ ಎಂಬೀ ಚತುರಕ್ಷರಮಂತ್ರವು
ಸೃಷ್ಟಿಮಂತ್ರವೆಂದರುಪಿದೆಯಯ್ಯಾ,
ಪರಮ ಶಿವಲಿಂಗದೇವ ಪರಿಪೂರ್ಣ ಭಾವ.
Art
Manuscript
Music
Courtesy:
Transliteration
Intu, sadāśivamantra nirūpaṇānantaradalli
mahēśvaramantramaṁ pēḷvenentene-
mahēśvaranene rudranātane sanhārakāraṇanātana
mantramaṁ sanhāravargakramadindud'dharipudenaladu
sr̥ṣṭi sthiti layaṅgaḷendu mūderanāgirpu- vavara
modala sr̥ṣṭivargamadentene,
bhūvargada mūraneyakkaramāda hakāramanud'dharisi,
jalavargada modalāda makāramanadarottinoḷirisi,
Bhūvargadombattaneya dakāramanaveraḍara
mundi-ṭṭākāśavargadāraneyadādekāramanadaridiroḷmaḍaṅgi-
yādhārādhēyasan̄jñitavāda sonneyiṁ kūḍise
yī nālkakkaraṅgaḷ
haṁ maṁ daṁ eṁ embī caturakṣaramantravu
sr̥ṣṭimantravendarupideyayyā,
parama śivaliṅgadēva paripūrṇa bhāva.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ