Index   ವಚನ - 115    Search  
 
ಇಂತು, ಸದಾಶಿವಮಂತ್ರ ನಿರೂಪಣಾನಂತರದಲ್ಲಿ ಮಹೇಶ್ವರಮಂತ್ರಮಂ ಪೇಳ್ವೆನೆಂತೆನೆ- ಮಹೇಶ್ವರನೆನೆ ರುದ್ರನಾತನೆ ಸಂಹಾರಕಾರಣನಾತನ ಮಂತ್ರಮಂ ಸಂಹಾರವರ್ಗಕ್ರಮದಿಂದುದ್ಧರಿಪುದೆನಲದು ಸೃಷ್ಟಿ ಸ್ಥಿತಿ ಲಯಂಗಳೆಂದು ಮೂದೆರನಾಗಿರ್ಪು- ವವರ ಮೊದಲ ಸೃಷ್ಟಿವರ್ಗಮದೆಂತೆನೆ, ಭೂವರ್ಗದ ಮೂರನೆಯಕ್ಕರಮಾದ ಹಕಾರಮನುದ್ಧರಿಸಿ, ಜಲವರ್ಗದ ಮೊದಲಾದ ಮಕಾರಮನದರೊತ್ತಿನೊಳಿರಿಸಿ, ಭೂವರ್ಗದೊಂಬತ್ತನೆಯ ದಕಾರಮನವೆರಡರ ಮುಂದಿ-ಟ್ಟಾಕಾಶವರ್ಗದಾರನೆಯದಾದೆಕಾರಮನದರಿದಿರೊಳ್ಮಡಂಗಿ- ಯಾಧಾರಾಧೇಯಸಂಜ್ಞಿತವಾದ ಸೊನ್ನೆಯಿಂ ಕೂಡಿಸೆ ಯೀ ನಾಲ್ಕಕ್ಕರಂಗಳ್ ಹಂ ಮಂ ದಂ ಎಂ ಎಂಬೀ ಚತುರಕ್ಷರಮಂತ್ರವು ಸೃಷ್ಟಿಮಂತ್ರವೆಂದರುಪಿದೆಯಯ್ಯಾ, ಪರಮ ಶಿವಲಿಂಗದೇವ ಪರಿಪೂರ್ಣ ಭಾವ.