Index   ವಚನ - 116    Search  
 
ಭೂವರ್ಗದ ಮೂರನೆಯ ಹ್ ಎಂಬ ವ್ಯಂಜನಮಂ ವ್ಯೋಮವರ್ಗದಂತ್ಯದಕಾರದೊಳ್ಕೂಡಿಸೆ ಹ ಎನಿಸಿತ್ತದರ ಮೇಲೆ ಶಕ್ತಿ ಸಂಜ್ಞಿತವಾದ ಸೊನ್ನೆಯನಿಡೆ ಹಂ ಎನಿಸಿತ್ತಾ ಭೂವರ್ಗದ ತುರ್ಯಗಣನೆಯಾದ ನಾಲ್ಕನೆಯ ಸ್ ಎಂಬುದಕ್ಕೆ ವ್ಯೋಮವರ್ಗದ ಕಡೆಯಕಾರಮಂ ಪತ್ತಿಸೆ ಸ ಎನಿಸಿತ್ತು. ಲಯವರ್ಗದ ಮೊದಲ ಕ್ಷ್ ಎಂಬುದಕ್ಕೆ ವ್ಯೋಮಾಂತಮಂ ಪತ್ತಿಸೆ ಕ್ಷ ಎನಿಸಿತ್ತಗ್ನಿಬೀಜ ಸಂಜ್ಞಿತವಾದ ರ್ ಎಂಬುದಕ್ಕದರಂತೆ ವ್ಯೋಮಾಂತಮಂ ಪತ್ತಿಸೆ ರ ಎನಿಸಿತ್ತು. ಭೂವರ್ಗದ ಕಡೆಯಕ್ಕರವಾದ ಯ್ ಎಂಬುದಕ್ಕೆ ವ್ಯೋಮಾಂತಮಂ ಪತ್ತಿಸೆ ಯೆ ಎನಿಸಿ- ತ್ತಾಕಾಶವರ್ಗದಾರನೆಯ ಎ ಎಂಬ ಸ್ವರಮುಮಿವೆಲ್ಲಕ್ಕಂ ತರದಿಂ ಶಕ್ತಿಸಂಜ್ಞಿತವಾದ ಸೊನ್ನೆಯಂ ಕೂಡಿಸೆ ಹಂ ಕ್ಷಂ ಮಂ ರಂ ಯಂ ಎಂ ಎಂಬೀ ಷಡಕ್ಷರಂ ಹಾರಮಂತ್ರಬೀಜವೆನಿಪುದೀ ಮಹೇಶ್ವರನ ಸೃಷ್ಟಿಸ್ಥಿತಿಲಯಾಭಿಧಾನಮಂತ್ರತ್ರಯಮಂ ನಿರವಿಸಿದೆಯಯ್ಯ, ಪರಶಿವಲಿಂಗದೇವ ಮಹಾನುಭಾವ.