ಭೂವರ್ಗದ ಮೂರನೆಯ ಹ್ ಎಂಬ ವ್ಯಂಜನಮಂ
ವ್ಯೋಮವರ್ಗದಂತ್ಯದಕಾರದೊಳ್ಕೂಡಿಸೆ ಹ ಎನಿಸಿತ್ತದರ ಮೇಲೆ
ಶಕ್ತಿ ಸಂಜ್ಞಿತವಾದ ಸೊನ್ನೆಯನಿಡೆ ಹಂ ಎನಿಸಿತ್ತಾ
ಭೂವರ್ಗದ ತುರ್ಯಗಣನೆಯಾದ ನಾಲ್ಕನೆಯ ಸ್ ಎಂಬುದಕ್ಕೆ
ವ್ಯೋಮವರ್ಗದ ಕಡೆಯಕಾರಮಂ ಪತ್ತಿಸೆ ಸ ಎನಿಸಿತ್ತು.
ಲಯವರ್ಗದ ಮೊದಲ ಕ್ಷ್ ಎಂಬುದಕ್ಕೆ ವ್ಯೋಮಾಂತಮಂ
ಪತ್ತಿಸೆ ಕ್ಷ ಎನಿಸಿತ್ತಗ್ನಿಬೀಜ ಸಂಜ್ಞಿತವಾದ ರ್ ಎಂಬುದಕ್ಕದರಂತೆ
ವ್ಯೋಮಾಂತಮಂ ಪತ್ತಿಸೆ ರ ಎನಿಸಿತ್ತು.
ಭೂವರ್ಗದ ಕಡೆಯಕ್ಕರವಾದ ಯ್
ಎಂಬುದಕ್ಕೆ ವ್ಯೋಮಾಂತಮಂ ಪತ್ತಿಸೆ ಯೆ ಎನಿಸಿ-
ತ್ತಾಕಾಶವರ್ಗದಾರನೆಯ ಎ ಎಂಬ ಸ್ವರಮುಮಿವೆಲ್ಲಕ್ಕಂ
ತರದಿಂ ಶಕ್ತಿಸಂಜ್ಞಿತವಾದ ಸೊನ್ನೆಯಂ ಕೂಡಿಸೆ
ಹಂ ಕ್ಷಂ ಮಂ ರಂ ಯಂ ಎಂ ಎಂಬೀ ಷಡಕ್ಷರಂ
ಹಾರಮಂತ್ರಬೀಜವೆನಿಪುದೀ ಮಹೇಶ್ವರನ
ಸೃಷ್ಟಿಸ್ಥಿತಿಲಯಾಭಿಧಾನಮಂತ್ರತ್ರಯಮಂ ನಿರವಿಸಿದೆಯಯ್ಯ,
ಪರಶಿವಲಿಂಗದೇವ ಮಹಾನುಭಾವ.
Art
Manuscript
Music Courtesy:
Video
TransliterationBhūvargada mūraneya h emba vyan̄janamaṁ
vyōmavargadantyadakāradoḷkūḍise ha enisittadara mēle
śakti san̄jñitavāda sonneyaniḍe haṁ enisittā
bhūvargada turyagaṇaneyāda nālkaneya s embudakke
vyōmavargada kaḍeyakāramaṁ pattise sa enisittu.
Layavargada modala kṣ embudakke vyōmāntamaṁ
pattise kṣa enisittagnibīja san̄jñitavāda r embudakkadarante
vyōmāntamaṁ pattise ra enisittu.
Bhūvargada kaḍeyakkaravāda y
embudakke vyōmāntamaṁ pattise ye enisi-
ttākāśavargadāraneya e emba svaramumivellakkaṁ
taradiṁ śaktisan̄jñitavāda sonneyaṁ kūḍise
haṁ kṣaṁ maṁ raṁ yaṁ eṁ embī ṣaḍakṣaraṁ
hāramantrabījavenipudī mahēśvarana
sr̥ṣṭisthitilayābhidhānamantratrayamaṁ niravisideyayya,
paraśivaliṅgadēva mahānubhāva.