Index   ವಚನ - 117    Search  
 
ಇಂತು ಶಿವ ಸದಾಶಿವ ಮಹೇಶ್ವರ ನಿರೂಪಣಾನಂತರದಲ್ಲಿ ಪಂಚಶಕ್ತಿ ಮಂತ್ರಬೀಜಂಗಳಂ ಪೇಳ್ವೆನೆಂತೆನೆ- ಶಕ್ತಿಸಂಜ್ಞಿತವಾದ ಸ್ ಎಂಬುದನ್ನುದ್ಧರಿಸಿ, ವಿಕೃತಿಸಂಜ್ಞಿತವಾದಾಕಾರವಂ ಪತ್ತಿಸಿ- ಯಗ್ನಿಸಂಜ್ಞಿತವಾದ ರ್ ಎಂಬುದಂ ಬೆರಸೆ ಸ್ರಾಯೆನಿಸಿತ್ತದಂ ಬಿಂದು ನಾದ ಸಂಜ್ಞಿತವಾದ ಸೊನ್ನೆಯೊಳ್ಕೂಡೆ ಸ್ರಾಂ ಯೆನಿಸಿತ್ತೀ ಶಕ್ತಿಬೀಜಂ ಸಮಸ್ತ ಶಕ್ತ್ಯಾಶ್ರಯವಾದ ಪ್ರಥಮಶಕ್ತಿಯೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯ.