Index   ವಚನ - 119    Search  
 
ಮತ್ತಂ, ಗಣಸಂಜ್ಞಿಕವಾದ ಗ್ ಎಂಬುದನುದ್ಧರಿಸಿ ವನ್ಹಿ ಸಂಜ್ಞಿಕವಾದ ರ್ ಎಂಬುದಂ ಬೆರಸೆ ಗ್ರ ಎನಿಸಿತ್ತದಂ ಮಾಯಾ ಸಂಜ್ಞಿಕವಾದಿಕಾರದೊಳ್ಮಿಶ್ರಿಸೆ ಗ್ರಿ ಯೆನಿಸಿತ್ತದಂ ಬಿಂದು ನಾದ ಸಂಜ್ಞಿಕವಾದ ಸೊನ್ನೆಯೊಳ್ಬೆರಸೆ ಗ್ರಿಂ ಯೆನಿಸಿ ಗೌರೀ ಬೀಜವಾಯಿತ್ತಿದೆ ಪ್ರಕಾರದಲ್ಲಿ ಮಿಕ್ಕ ಶಕ್ತಿಗಳ್ಗೆಯುಮವರವರ ನಾಮಂಗಳ ಮೊದಲಕ್ಕರಂಗಳಲ್ಲಿ ಬೀಜಮಂತ್ರಗಳನರಿವುದೆಂದು ನಿರೂಪಿಸಿದೆಯಯ್ಯಾ, ಪರಮಗುರು ಪರಶಿವಲಿಂಗಯ್ಯ.