Index   ವಚನ - 123    Search  
 
ಮತ್ತೆಯುಮಾ, ಮಂತ್ರಮೂರ್ತಿಯಂ ಧ್ಯಾನಿಸಿ ಪೂಜನಂಗೆಯ್ವುದಂ ಪೇಳ್ವೆನೆಂತೆನೆ- ಪೂರ್ವೋಕ್ತ ಪಂಚಾಕ್ಷರ ಷಡಕ್ಷರಷ್ಟಾಕ್ಷರ ನವಾಕ್ಷರ ದಶಾಕ್ಷರಂಗಳಿಂ ತರದಿಂದಾ ಮಂತ್ರಮೂರ್ತಿಯಂ ಕರೆವುದು, ಮೂರ್ತಿಗೊಳಿಪುದು, ಪ್ರತ್ಯಕ್ಷೀಕರಿಪುದು, ಮಾನಸಾದ್ಯಂತಃಕರಣಮಂ ನಿವೇದಿಪುದು ಪೂಜಿಪುದಿಂತು ಹೃತ್ಕಮಲ ಕರ್ಣಿಕಾಮಧ್ಯದಲ್ಲಿರ್ದ ಮಂತ್ರಮೂರ್ತಿಗೆ ಬ್ರಹ್ಮಮಂತ್ರಂಗಳಿನಂಗಮಂತ್ರಗಳಿಂದೆಯುಂ ಪಾದ್ಯ ಗಂಧಾದಿಗಳನೀವುದು- ಮಾದಿಶಕ್ತಿಗಳಂ ಸ್ಥಾಪಿಸುವ ಕಾಲದಲ್ಲಿಯಾಯಾಯ ಶಕ್ತಿ ಬೀಜಂಗಳ- ನಂತಾಯಾಯ ಶಕ್ತಿಗಳ ಹೃದಯಂಗಳಲ್ಲಿ ನ್ಯಾಸಂಗೆಯ್ವುದೆಲ್ಲ ಕ್ರಿಯಾಶರೀರವೆಂದುಪದೇಶಿಸಿದೆಯಯ್ಯಾ, ಪರಾತ್ಪರ ಪರಶಿವಲಿಂಗೇಶ್ವರ.