Index   ವಚನ - 122    Search  
 
ಮತ್ತಂ, ಕ್ರಮದಿಂ ಹ್ರೌಂ ಎಂಬ ಮೂಲಪ್ರಸಾದವಾಚಕದಲ್ಲಿ ಕರ್ಮಸಾದಾಖ್ಯ ವಾಚ್ಯಮಂ ನ್ಯಾಸಂಗೆಯ್ವುದು. ಹಂ ಎಂಬ ತತ್ವಪ್ರಸಾದವಾಚಕದಲ್ಲಿ ಕರ್ತೃಸಾದಾಖ್ಯ ವಾಚ್ಯಮಂ ನ್ಯಾಸಂಗೆಯ್ವುದು. ಹೌಂ ಎಂಬಾದಿ ಪ್ರಸಾದವಾಚಕದಲ್ಲಿ ಮೂರ್ತಿಸಾದಾಖ್ಯ ವಾಚ್ಯಮಂ ನ್ಯಾಸಂಗೆಯ್ವುದು. ಹಂಸ ಎಂಬಾತ್ಮಪ್ರಸಾದವಾಚಕದಲ್ಲಿ ಅಮೂರ್ತಿ ಸಾದಾಖ್ಯವಾಚ್ಯಮಂ ನ್ಯಾಸಂಗೆಯ್ವುದು. ಹ ಎಂಬ ಶುದ್ಧಪ್ರಸಾದವಾಚಕದಲ್ಲಿ ಶಿವಸಾದಾಖ್ಯ ವಾಚ್ಯಮಂ ನ್ಯಾಸಂಗೆಯ್ವುದಿಂತು ಪಂಚಪ್ರಸಾದದಲ್ಲಿ ಪಂಚಸಾದಾಖ್ಯ ತತ್ವಮಂ ನ್ಯಾಸೀಕರಿಸಿದೆಯಯ್ಯಾ, ಪರಶಿವಲಿಂಗಯ್ಯ.