Index   ವಚನ - 124    Search  
 
ಮತ್ತೆಯುಂ, ಕ್ರಿಯೆಯೆ ಶರೀರಂ ಮಂತ್ರವೆ ಜೀವವಿಮೆವೆರಡರ ಯೋಗವೆ ದೇಹ ಪ್ರಾಣ ಸಂಬಂಧವದೆ ಶಿವಸಾನ್ನಿಧ್ಯ ಕಾರಣ- ಮದರಿಂದೆ ಕ್ರಿಯಾಮಂತ್ರಂಗಳುಭಯಂಗೂಡಿ ದೇಹ ಪ್ರಾಣಮಯವೆಂದರಿದಾಚರಿಪುದೆಂದು ನಿರವಿಸಿದೆಯಯ್ಯಾ, ವಿಶ್ವಮಯ ವಿಶ್ವೇಶ್ವರ ಪರಶಿವಲಿಂಗೇಶ್ವರ.