Index   ವಚನ - 125    Search  
 
ಮತ್ತಮಿಂತು ಮಂತ್ರಭೇದ ನಿರೂಪಣಾನಂತರದಲ್ಲಿ ಪ್ರಣವಭೇದಮಂ ಪೇಳ್ವೆನೆಂತೆನೆ-ಯಾ ಪ್ರಣವಂ ಶಿವಾಕ್ಷರಂ ನಡುವೆಯುಳ್ಳುದರಿಂ ತನ್ನಂಗರ್ತವಾದ ಸಮಸ್ತಾಕ್ಷರಂಗಳಂ ಸಕಲದೇವತಾ ಸ್ವರೂಪಂಗಳಾ-ದೇವತಾಸ್ವರೂಪಂಗಳೆಲ್ಲಂ ತನ್ನ ಸ್ವರೂಪಂಗಳಾ ದೇವತಾಮಂತ್ರಂಗಳ್ಗೆ ತಾನೆ ಪ್ರಾಣಮಾ ಪ್ರಾಣಮೆನಿಸಿ ಸದಾಶಿವೋಮೆಂಬ ಶ್ರುತಿಪ್ರಮಾಣದಿಂದಾ ಪ್ರಣವವೆ ಪರಿಪೂರ್ಣ ಪರಂಜ್ಯೋತಿಯೆಂದು ಬೋಧಿಸಿದೆಯಯ್ಯಾ, ಪರಶಿವಲಿಂಗಯ್ಯ.