Index   ವಚನ - 130    Search  
 
ಇಂತು, ಪೂರ್ವೋಕ್ತ ಪಂಚಬ್ರಹ್ಮವಪ್ಪ ಶಿವಬೀಜವೆ ಸಾಕಲ್ಯಾದಿ ಸಾಯುಜ್ಯಾಂತವಾದ ಪ್ರಣವ ಸ್ವರೂಪವಾದ ಕಾರಣ ಮೂರ್ತಿವೆತ್ತಿಹುದಾಗಿಯಾ ಪಂಚ ಪ್ರಣವವೆ ಮೂರ್ತಿಬ್ರಹ್ಮಂ. ಶುದ್ಧಾಧ್ಯಾತ್ಮಾಂತವಾದ ಪಂಚಪ್ರಸಾದ ಬೀಜವೆ ಸಕಲ ನಿಷ್ಕಲ ಸ್ವರೂಪದಿಂದ ಭೋಗ್ಯಪಂಚಕೋತ್ಪತ್ತಿ ಕಾರಣವೆನಿಸಿತ್ತಾಗಿಯಾ ಪ್ರಸಾದಪಂಚಕವೆ ತತ್ವಬ್ರಹ್ಮಂ. ಭೂಮ್ಯದ್ಯಾಕಾಶಾಂತವಾದ ಪಂಚಭೌತಿಕ ಬೀಜಂಗಳೊಳ್ತಾಂ ಶೂನ್ಯಬೀಜವಾದುದರಿಂ ತನ್ನ ಭೋಗವಕ್ತ್ರಪಂಚಕ ಸಾಧನಾರ್ಥ ಭೂತವತ್ತೆನಿಸಿತ್ತಾಗಿಯಾ ಲಕಾರಾದಿ ಹಕಾರಾಂತ ಭೂತವರ್ಣ ಪಂಚಕವೆ ಭೂತಬ್ರಹ್ಮಂ. ಸದ್ಯಾದೀಶಾನಾಂತವಾದ ಪಂಚವಕ್ತ್ರಬೀಜಪಂಚಕವೆ ಪಿಂಡಬ್ರಹ್ಮವದು. ಕರ್ಮಸಾದಾಖ್ಯ ಭೌತಿಕಸ್ತವಾದಾತ್ಮತತ್ವದಲ್ಲಿ ತೋರಿಪ್ಪ ಕಾರಣಂ, `ಹ್ರಸ್ವಂಸ್ಯಾದ್ಬ್ರಹ್ಮನಿಚಯ'ಮೆಂಬುದರಿಂ, ಹ್ರಸ್ವಸ್ವರ ಪಂಚಕವ[ದೆ]ನಿಸಿತ್ತಾಗಿ ಸದ್ಯಾದಿ ವಕ್ತ್ರಪಂಚಕವೆ ಪಿಂಡಬ್ರಹ್ಮ ಪಂಚಕಂ. ಕರ್ಮಸಾದಾಖ್ಯವೆಂದು ದಿವ್ಯಲಿಂಗವೆಂದಾತ್ಮತತ್ವವೆಂದು ಪಂಚವಕ್ತ್ರವೆಂದು ಪಿಂಡವೆಂದಿಲ್ಲವೊಂದರ ಪರ್ಯಾಯನಾಮವಲ್ಲದೆ ಪೆರತಲ್ಲವೀ ಪಂಚಬ್ರಹ್ಮಬೀಜಂಗಳಾರಾಧಕರ ಜಪನಿಮಿತ್ತವಾಗಿ ಪಂಚಬ್ರಹ್ಮಮಂತ್ರ ವಿಭಾಗೆವಡೆದವು. ಕರ್ತೃಸಾದಾಖ್ಯವೆಂದು ದಿವ್ಯಲಿಂಗವೆಂದಾತ್ಮತತ್ವವೆಂದು ಪಂಚವಕ್ತ್ರವೆಂದು ಪಿಂಡಬ್ರಹ್ಮವೆಂದು ನಾಮಪರ್ಯಾಯವಲ್ಲದೆ ಪೆರತಲ್ಲವೀ ಪಂಚಬ್ರಹ್ಮಬೀಜಂಗಳಾರಾಧಕರ ಜಪನಿಮಿತ್ತವಾಗಿಯಾ ಪಂಚಬ್ರಹ್ಮಮಂತ್ರಗಳೆ ವಿಭಾಗೆವಡೆದವು. ಸ್ವ ಪರಾಶಕ್ತಿ ಸಂಭೂತವಾಗಿ ಜ್ಯೋತಿರ್ದೇವತಾಧಿಪತಿಗಳಾದ ಸಕಲ ವರ್ಣ ಕಲೆಗಳಿಗೆ ತಾನೆ ಆಶ್ರಯವಾದ ಕಾರಣಂ ಪಿಂಡಬ್ರಹ್ಮ ಮಂತ್ರಪಂಚಕವೆ ಕಲಾಬ್ರಹ್ಮ ಪಂಚಕವೆಂದುಕ್ತ ಮಾದುದಿಂತು ಪಂಚಬ್ರಹ್ಮವಿಭಾಗವಾದ ಪಂಚವಿಂಶತಿ ಬ್ರಹ್ಮಭೇದಮಂ ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.