ಬಳಿಕ್ಕಂ, ಚತುರ್ಭುಜ, ತ್ರೀನೇತ್ರ, ಜಟಾಮಕುಟ,
ಸರ್ವಲಕ್ಷಣಸಂಯುಕ್ತ, ಸರ್ವಾಭರಣಭೂಷಿತ,
ತ್ರಿಶೂಲಾಭಯ ಕಪಾಲ ವರದಾನ್ವಿತ,
ದಕ್ಷಿಣ ಮಕರವಾ ಚತುಷ್ಟಯ,
ಹಾರ ಕೇಯೂರ ಕಟಕ ಕುಂಡಲಾದಿಗಳಿಂದಲಂಕೃತವಾದ
ಸರ್ವಾವಯವಂಗಳನುಳ್ಳುದೆ ಸೌಮ್ಯರೂಪ ಮುಳಿದುದೆಲ್ಲಂ
ರುದ್ರರೂಪಮೆಂದು ನಿರವಿಸಿಯಾ ಶಿವಾಂಗಂಗಳಿಂದವೆ
ಶಿವಾರ್ಚನೆಯನೆಸಗುವದೆಂದೆಯಯ್ಯಾ, ಪರಶಿವಲಿಂಗಯ್ಯ.
Art
Manuscript
Music
Courtesy:
Transliteration
Baḷikkaṁ, caturbhuja, trīnētra, jaṭāmakuṭa,
sarvalakṣaṇasanyukta, sarvābharaṇabhūṣita,
triśūlābhaya kapāla varadānvita,
dakṣiṇa makaravā catuṣṭaya,
hāra kēyūra kaṭaka kuṇḍalādigaḷindalaṅkr̥tavāda
sarvāvayavaṅgaḷanuḷḷude saumyarūpa muḷidudellaṁ
rudrarūpamendu niravisiyā śivāṅgaṅgaḷindave
śivārcaneyanesaguvadendeyayyā, paraśivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ