Index   ವಚನ - 169    Search  
 
ಮತ್ತಂ, ಪಡುವ ತೊಡಗಿ ಮೂಡಲತನಕಲಿ ಲಿಂಗಕ್ಕೋಸುಗರಂ, ಬೀದಿಗಳಂ ಬಿಡುವುದಾ ಮೇಲೆ ಮಧ್ಯದಲೆರಡೆರಡು ಬೀದಿಗಳ ನಾಲ್ಕು ನಾಲ್ಕು ಮನೆಗಳನುಳುಹಿ- ಯಾ ಮೇಲೆ ಇಕ್ಕೆಲಗಳಲ್ಲಾರಾರು ಮನೆಗಳಂ ತೊಡೆವುದದರಿಂ ಮೇಲಣ ಪಂತಿಯಂ ಬಿಟ್ಟುವದರಿಂ ಮುಂದಣಪಂತಿಯಾಚೀಚೆ ಎರಡೆರಡು ಮನೆಗಳಂ ತೊಡೆದು ನಡುವಣ ಪನ್ನೆರಡು ಮನೆಗಳನುಳುಹುವದದರೀಚೆ ಪಂತಿಯಾಚೀಚೆಯ ಮೂರುಮೂರು ಮನೆಗಳಂ ತೊಡೆದು ನಡುವಣ ಪತ್ತುಮನೆಗಳನುಳುವದದರೀಚೆ ಪಂತಿಯಾಚೀಚೆಯೈದೈದು ಮನೆಗಳಂ ತೊಡೆದು ನಡುವಣಾರಾರು ಮನೆಗಳನುಳುಹುವದದರೀಚೆ ಪಂತಿಯಾಚೀಚೆಯಾರಾರು ಮನೆಗಳಂ ತೊಡೆದು ನಡುವಣ ನಾಲ್ಕು ಮನೆಗಳನುಳುಹವದದರೀಚೆ ಪಂತಿಯಾಚೀಚೆಯಾರಾರು ಮನೆಗಳಂ ತೊಡೆದು ಮತ್ತೆಯುಂ, ನಡುವಣ ನಾಲ್ಕುಮನೆಗಳನುಳುಹುವದದರೀಚೆ ಪಂತಿಯಾಚೀಚೆಯ ಐದೈದು ಮನೆಗಳಂ ತೊಡೆದು ನಡುವಣಾರು ಮನೆಗಳನುಳುಹುವದದರೀಚೆ ಪಂತಿಯಾಚೀಚೆ ಮೂರು ಮೂರು ಮನೆಗಳಂ ತೊಡೆದು ಪತ್ತು ಪಂತಿಯನುಳುಹುವದದರೀಚೆ ಪಂತಿಯಾಚೀಚೆಯಾರಾರು ಮನೆಗಳಂ ತೊಡೆದು ನಾಲ್ಕು ಪಂತಿಗಳನುಳುಹುವದಿದುಂ ಲಿಂಗಾಕಾರವಹುದೀ ಈ ಮಹಾಲಿಂಗಂ ಬ್ರಹ್ಮ ವಿಷ್ಣು ಕಾಲರುದ್ರ ಸಂಜ್ಞೆಯನುಳ್ಳ ರಾಜಸಿ ಸಾತ್ವಿಕಿ ರೌದ್ರಿ ಶಕ್ತಿ ಸಂಜ್ಞೆ ಪೀಠವನುಳ್ಳ ಲಿಂಗವೆ ಬ್ರಹ್ಮವೆಂದು, ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.