Index   ವಚನ - 168    Search  
 
ಮರಲ್ದುಂ ಗುಳಿ ತೆವರಿಲ್ಲದ ಗೋಮಯಾನುಲೇಪಿತ ಶುದ್ಧಭೂಮಿಯಲ್ಲಿ ರಾಜಾನ್ನದ ಹಿಟ್ಟಿನಿಂದಳ್ದಿದ ದಾರದಿಂ ಪೂರ್ವ ಪಶ್ಚಿಮಕ್ಕೆಯುಂ ದಕ್ಷಿಣೋತ್ತರಕ್ಕೆಯುಂ ತರದಿಂ ಪದಿನೇಳು ಪದಿನೇಳು ಗೆರೆಗಳಪ್ಪಂತೆ ಮಿಡಿಯೆ ಪದಿನಾರುಪಂತಿಗಳಹವಾವಕಡೆಗೆಯುಮಿವಂ ಗಣಿಸೆ ಇನ್ನೂರೈವತ್ತಾರು ಮನೆಗಳಹವೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯ.