Index   ವಚನ - 170    Search  
 
ಮತ್ತಂ ಅಧಃಪಟ್ಟಿಕೆಯೆಂದುಂ ಅಧಃಕಂಜವೆಂದುಂ ಕಂಠವೆಂದುಂ ಊರ್ಧ್ವಾಬ್ಜವೆಂದುಂ ಊರ್ಧ್ವಪಟ್ಟಿಕೆಯೆಂದುಂ ಆ[ಜ್ಯ]ಪ್ರಧಾರಿಕೆಯೆಂದೀ ಆರಂ ಶಿವಲಿಂಗದ ಪೀಠದ ನಾಲ್ಕು ಕೋಷ್ಠಂಗಳಾದಿಯಾಗಿ ಲಿಂಗತನಕಂ ತಿಳಿವುದಂತೆಯೆ ಗಣಚತುಃಕೋಷ್ಠವಾದಿಯಾಗಿ ಅಧೋಲಿಂಗತನಕಲಿ ಷಡಂಗ [ಷ]ಟ್ಸ್ಥಾನಂಗಳಂತರದಿಂದರಿಯಬೇಕೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.