Index   ವಚನ - 192    Search  
 
ಮತ್ತಂ, ಪಿಂದಣ ಚಕ್ರೋದ್ಧರಣಮೆ ಈ ಲಿಂಗೋದ್ಧರಣ ವದೇಂ ಕಾರಣವೆಂದೊಡೆ, ಸಕಲಾತ್ಮರ ದ್ವಾದಶಾಂತದಲ್ಲಿ ಮಂಡಲತ್ರಯ ಮಧ್ಯದ ಸ್ಥೂಲ ಕರ್ಣಿಕಾಂತಸ್ಥಿತ ಸೂಕ್ಷ್ಮರಂಧ್ರಗತವಾದ ಮೂಲಾಧಾರಂ ತೊಡಗಿ ಬ್ರಹ್ಮರಂಧ್ರಸಂಜ್ಞಿಕ ಬ್ರಹ್ಮನಾಡಿ ಪರ್ಯಂತಂ ವ್ಯಾಪಕವಾಗಿ ನಾದಬ್ರಹ್ಮವೆನಿಪ ಪರಮ ಚೈತನ್ಯಕ ಪರಮಾತ್ಮನೆನಿಕುಮದೆ ನವನೀತದೊಳ್ ಘೃತವಿರ್ದಂತೆಲ್ಲರೆಳಿರ್ದೊಡೆಯು ಅಗ್ನಿಮುಖದೊಳ್ತುಪ್ಪವೆಂತು ಸಾಕ್ಷಾತ್ಕರಿಪುದಂತೆ ಜ್ಞಾನಗುರುಮುಖದಿಂ ಪ್ರತ್ಯಕ್ಷವಾಗಿ ಲಿಂಗಾಕಾರವಾಗಿರ್ಪುದಾ ಚಕ್ರೋದ್ಧರಣ ಕೋಷ್ಠದಳನ್ಯಸ್ತ ವಾಚಕ ವಾಚ್ಯರುದ್ರರುಂ ರುದ್ರಶಕ್ತಿಯರುಮೊಂದೆಯೆಂದು ನಿರವಿಸಿದೆಯಯ್ಯಾ, ಶಿವಲಿಂಗಯ್ಯ.