Index   ವಚನ - 193    Search  
 
ಇಂತೀ ಮಹಾಲಿಂಗದ ಶಿವಶಕ್ತ್ಯಾತ್ಮಕ ಚಕ್ರನ್ಯಾಸ ನಿರೂಪಣಾನಂತರದಲ್ಲಿ, ಮೂರ್ತಮಂತ್ರಮಂ ಪೇಳ್ವೆನೆಂತೆನೆ- ನಾದ ಸಂಜ್ಞಿಕವಾದ ಹ ಕಾರಮನಾಜ್ಯಪ್ರಧಾರಿಕೆ ಮೇಲಣ ಪಂತಿಯ ಮೇಲೆ ಚತುಷ್ಕೋಷ್ಠ ಮಧ್ಯದಲ್ಲಿ ನ್ಯಾಸಂಗೆಯ್ವುದು. ಬಿಂದು ಸಂಜ್ಞಿಕವಾದೋಕಾರಮನಾಜ್ಯಪ್ರಧಾರಿಕೆಯಲ್ಲಿರಿಸೂದು. ಮಕಾರಮಂ ಊರ್ಧ್ವಪಟ್ಟಿಕಾದಿಯಾಗಿ ಊರ್ಧ್ವಕಂಜಪರ್ಯಂತದಲ್ಲಿ ಮಡಗುವುದು. ವೃತ್ತದಲ್ಲಿ ಉ ಕಾರಮನಿರಿಸೂದು. ಅ ಕಾರಮನಧಃಕಂಜಾಧಃ ಪಟ್ಟಿಕೆಗಳಲ್ಲಿಡುವುದಿಂತು ಹ ಒ ಮ ಉ ಅ ಎಂಬೀ ಸೂಕ್ಷ್ಮ ಪಂಚಾಕ್ಷರ ನ್ಯಾಸಮಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.