ಇಂತೀ ಮಹಾಲಿಂಗದ ಶಿವಶಕ್ತ್ಯಾತ್ಮಕ ಚಕ್ರನ್ಯಾಸ
ನಿರೂಪಣಾನಂತರದಲ್ಲಿ,
ಮೂರ್ತಮಂತ್ರಮಂ ಪೇಳ್ವೆನೆಂತೆನೆ-
ನಾದ ಸಂಜ್ಞಿಕವಾದ ಹ ಕಾರಮನಾಜ್ಯಪ್ರಧಾರಿಕೆ
ಮೇಲಣ ಪಂತಿಯ ಮೇಲೆ
ಚತುಷ್ಕೋಷ್ಠ ಮಧ್ಯದಲ್ಲಿ ನ್ಯಾಸಂಗೆಯ್ವುದು.
ಬಿಂದು ಸಂಜ್ಞಿಕವಾದೋಕಾರಮನಾಜ್ಯಪ್ರಧಾರಿಕೆಯಲ್ಲಿರಿಸೂದು.
ಮಕಾರಮಂ ಊರ್ಧ್ವಪಟ್ಟಿಕಾದಿಯಾಗಿ
ಊರ್ಧ್ವಕಂಜಪರ್ಯಂತದಲ್ಲಿ ಮಡಗುವುದು.
ವೃತ್ತದಲ್ಲಿ ಉ ಕಾರಮನಿರಿಸೂದು.
ಅ ಕಾರಮನಧಃಕಂಜಾಧಃ ಪಟ್ಟಿಕೆಗಳಲ್ಲಿಡುವುದಿಂತು
ಹ ಒ ಮ ಉ ಅ ಎಂಬೀ ಸೂಕ್ಷ್ಮ ಪಂಚಾಕ್ಷರ ನ್ಯಾಸಮಂ
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
Art
Manuscript
Music Courtesy:
Video
TransliterationIntī mahāliṅgada śivaśaktyātmaka cakran'yāsa
nirūpaṇānantaradalli,
mūrtamantramaṁ pēḷvenentene-
nāda san̄jñikavāda ha kāramanājyapradhārike
mēlaṇa pantiya mēle
catuṣkōṣṭha madhyadalli n'yāsaṅgeyvudu.
Bindu san̄jñikavādōkāramanājyapradhārikeyallirisūdu.
Makāramaṁ ūrdhvapaṭṭikādiyāgi
ūrdhvakan̄japaryantadalli maḍaguvudu.
Vr̥ttadalli u kāramanirisūdu.
A kāramanadhaḥkan̄jādhaḥ paṭṭikegaḷalliḍuvudintu
ha o ma u a embī sūkṣma pan̄cākṣara n'yāsamaṁ
niravisideyayyā, paraśivaliṅgayya.