Index   ವಚನ - 194    Search  
 
ಬಳಿಕ್ಕಮೀ ಸೂಕ್ಷ್ಮ ಪಂಚಾಕ್ಷರ ನ್ಯಾಸಾನಂತರದಲ್ಲಿ ಸ್ಥೂಲಪಂಚಾಕ್ಷರ ನ್ಯಾಸಮಂ ಪೇಳ್ವೆನೆಂತೆನೆ- ನ ಕಾರಾದಿ ಯ ಕಾರಾಂತವಾದೈದಕ್ಕರಂಗಳನಾಧಾರಾದಿ ವಿಶುದ್ಧ್ಯಂತವಾದೈದು ಚಕ್ರಂಗಳಲ್ಲಿರಿಸೂದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.