Index   ವಚನ - 204    Search  
 
ಮತ್ತಂ ವಾಹನಮೆಂತನೆ- ಲಿಂಗದಲ್ಲಿಯುಂ, ಸ್ಥಂಡಿಲೋದ್ಧರಣ ಲಿಂಗದಲ್ಲಿಯುಂ, ರುದ್ರಮೂರ್ತಿ ಪ್ರತಿಮೆಗಳಲ್ಲಿಯುಂ, ಪ್ರತಿಷ್ಠಾ ಕಾಲದಲ್ಲಿ ಸ್ಥಾಪಿತ ಕುಂಭಗಳಲ್ಲಿಯುಂ, ವಸ್ತುವಿನಲ್ಲಿಯುಂ, ಕುಂಡಾಗ್ನಿಯಲ್ಲಿಯುಂ ಮೂಲಸ್ಥಾನದಲ್ಲಿಯುಂ, ದೀಕ್ಷಾ ಕಾಲಂಗಳಲ್ಲಿ ಸ್ಥಾಪಿತ ಮಂತ್ರಾವಾಸ ಪ್ರೋಕ್ಷಣ ಜಲಕಲಶಂಗಳಲ್ಲಿಯೂ, ಪ್ರಯೋಗಿಸಲ್ಪಟ್ಟುದೆ ಮಂತ್ರವಾಹನವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.