Index   ವಚನ - 205    Search  
 
ಬಳಿಕ್ಕಂ, ವಶಮನ್ಯಾಯದಂತೆ ಪೂರ್ಣಚಿತಿಯೆಂತೆನೆ-ಆದಿವಾಲಾದಿ ಮಂತ್ರವಾಹನಾಂತವಾದ ಪದಿನೆಂಟು ಕುರುಹುಗಳನೊಳಕೊಂಡು ಮಯೂರಾಂಡಕುಂಡಲ ಹಿರಣ್ಯ ಸಾಗರೋರ್ಮಿಗಳೆಂತಭೇದವಂತ- ಭಿನ್ನ ಪ್ರಕಾಶವೆ ಪೂರ್ಣ ಚಿದ್ಗುಹ್ಯಮೆನಿಕುಮೆಂದೀ ಮಂತ್ರಜಾತದ ಪತ್ತೊಂಬತ್ತು ಲಕ್ಕಣಮಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ, ಪರಾತ್ಪರ ಶರಣಾಂತರಂಗ ಶಯ್ಯಾ.