Index   ವಚನ - 3    Search  
 
ರಸ ಜಿಹ್ನೆಯಲ್ಲಿ, ಗಂಧ ನಾಸಿಕದಲ್ಲಿ ರೂಪ ದೃಕ್ಕಿನಲ್ಲಿ, ಶಬ್ದ ಬ್ರಹ್ಮರಂಧ್ರದಲ್ಲಿ ಸ್ಪರ್ಶನ ಪಾಣಿ ಪಾದ ಗುಹ್ಯಂಗಳಲ್ಲಿ ಇಂತೀ ಪಂಚೇಂದ್ರಿಯಂಗಳಲ್ಲಿ ಇಂದೇ ಅಷ್ಟಗುಣ ದಶಸಂಚಾರ ಸಪ್ತಭೇದ ಷಡ್ಗುಣಭಾವ, ಚತುಷ್ಟಯ ಮುಟ್ಟು, ಷೋಡಶಯುಕ್ತಿ, ತ್ರಿಸಂಧ್ಯಾತ್ಮ ಉಚಿತ ಮೂಲ ಪಂಚವಿಂಶತಿಭೇದ ಇಂತಿವರೊಳಗಾದ ಸಂಚಾರದ ಸಂಚವನರಿದು ಅಳಿವು ಉಳಿದ ಪ್ರಮಾಣಿಸಿ ನಿಂದುದು ನಿಜಾತ್ಮಯೋಗ ಇದು ಜ್ಞಾನ ಪಿಂಡೋದಯ, ಬಸವಣ್ಣಪ್ರಿಯ ಕೂಡಲ ಚೆನ್ನಸಂಗಮದೇವರಲ್ಲಿ.